ಕ್ರೈಸ್ತ ಅಲ್ಪಸಂಖ್ಯಾತ ಸೊಸೈಟಿ ನಿರಖು ಠೇವಣಿ ಅಭಿಯಾನ

0


ಸುಳ್ಯ ಕ್ರೈಸ್ತ ಅಲ್ಪಸಂಖ್ಯಾತ ವಿವಿಧೋದ್ದೇಶ ಸಹಕಾರಿ ಸಂಘದ ವತಿಯಿಂದ ಕ್ರಿಸ್ಮಸ್ ಹಾಗೂ ಹೊಸ ವರ್ಷದ ಸಲುವಾಗಿ ನಿರಖು ಠೇವಣಿ ಅಭಿಯಾನ ಸಂಘದ ಕಡಬ ಶಾಖೆಯಲ್ಲಿ ಉದ್ಘಾಟನೆಗೊಂಡಿತು.


ಸಹಕಾರಿ ಸಂಘದ ಅಧ್ಯಕ್ಷ ಬಿಟ್ಟಿ ಬಿ ನೆಡುನಿಂ ಅಧ್ಯಕ್ಷತೆ ವಹಿಸಿದ್ದರು.
ಮಾಜಿ ಸೈನಿಕರ ಸಂಘದ ಜಿಲ್ಲಾದ್ಯಕ್ಷರಾದ ಜೆ.ಪಿ ಎಂ ಚೆರಿಯಾನ್ ಅಭಿಯಾನಕ್ಕೆ ಚಾಲನೆ ನೀಡಿದರು.
ಮುಖ್ಯ ಅತಿಥಿಗಳಾಗಿ ಕಡಬ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಾಲಕೃಷ್ಣ ಬಲ್ಲೇರಿ,ಚಿಂತಕ ವಾಣಿಜ್ಯೋದ್ಯಮಿ ಲಕ್ಮೀಶ ಗಬಲಡ್ಕ, ಅನಿವಾಸಿ ಉದ್ಯಮಿ ಚಾಕೊ ಎಂ‌.ಪಿ,ಬೊಸ್ಕೊ ಕೊರ್ಮಡಂ,ಕಡಿಬ ಪಟ್ಟಣ ಪಂಚಾಯತ್ ಮಾಜಿ ಸದಸ್ಯ ಸೈಮನ್,ಮೊದಲಾದವರು ಉಪಸ್ಥಿತರಿದ್ದರು.


ಈ ಅಭಿಯಾನ ಡಿ.1 ರಿಂದ ಜ.1 ರವರೆಗೆ ನಡೆಯಲಿದೆ ಎಂದು ಸಂಘದ ಅಧ್ಯಕ್ಷರು ತಿಳಿಸಿದರು.
ಸಂಘದ ಉಪಾಧ್ಯಕ್ಷ ಜಾನ್ ವಿಲಿಯಂ ಲಸ್ರಾದೊ,ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಜಿತ್ ಪಿ ಜಿ,ಹಾಗೂ ಆಡಳಿತ ಮಂಡಳಿ ಸದಸ್ಯರು ಹಾಗೂ ಸಂಘದ ಹಿತೈಷಿಗಳು ಭಾಗವಹಿಸಿದರು.


ಶಾಖಾ ವ್ಯವಸ್ಥಾಪಕ ಮೊನಪ್ಪ ಗೌಡ ಸ್ವಾಗತಿಸಿ ವಂದಿಸಿದರು.
ಕು.ಡೈಸಿ ಹಾಗೂ ಕು.ವಂದಿತಾ ಕಾರ್ಯಕ್ರಮ ನಿರೂಪಿಸಿದರು.