ಮಿತ್ತಡ್ಕ ನ್ಯಾಯಬೆಲೆ ಅಂಗಡಿಗೆ ಬಯೋಮೆಟ್ರಿಕ್ ಅಳವಡಿಸುವಂತೆ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಆದೇಶ

0

ಈ ಹಿಂದೆ ದೂರದ ಗೋಳಿಯಡ್ಕಕ್ಕೆ ತೆರಳಿ ತಂಬ್ ಹಾಕಿ ಬರುತ್ತಿದ್ದ ಸ್ಥಳೀಯರು

ಮರ್ಕಂಜ ಗ್ರಾಮದ ಮಿತ್ತಡ್ಕ ನ್ಯಾಯಬೆಲೆ ಅಂಗಡಿಗೆ ಬಯೋಮೆಟ್ರಿಕ್ ಅಳವಡಿಸುವಂತೆ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಆದೇಶಿಸಿದ್ದಾರೆ.

ಗ್ರಾಮದಲ್ಲಿ ಸುಮಾರು 900ಕ್ಕಿಂತಲೂ ಹೆಚ್ಚು ಕುಟುಂಬಗಳಿದ್ದು ಗೋಳಿಯಡ್ಕದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿರುವ ನ್ಯಾಯಬೆಲೆ ಅಂಗಡಿಯಿಂದ ಪಡಿತರ ಪಡೆಯುತ್ತಿದ್ದಾರೆ.

ಆದರೆ ಮಿತ್ತಡ್ಕ ಎಂಬಲ್ಲಿ ಇದೇ ಸಹಕಾರ ಸಂಘದ
ನ್ಯಾಯಬೆಲೆ ಅಂಗಡಿ ಇದ್ದರೂ
ಬಯೋಮೆಟ್ರಿಕ್ ವ್ಯವಸ್ಥೆ ಇಲ್ಲದಿರುವುದರಿಂದ ಸ್ಥಳೀಯ ಹೈದಂಗೂರು, ಬಳ್ಳಕ್ಕಾನ , ಕಟ್ಟಕೋಡಿ , ಪೊಯ್ಯೆ ಗುಂಡಿ, ಚೀಮಾಡು ಈ ಭಾಗದ ಪಡಿತರ ಫಲಾನುಭವಿಗಳು ದೂರದಲ್ಲಿರುವ ಗೋಳಿಯಡ್ಕಕ್ಕೆ ತೆರಳಿ ತಂಬ್ ಹಾಕಿ ಪಡಿತರ ತರುವುದು ಅನಿವಾರ್ಯವಾಗಿತ್ತು. ಜನರಿಗಾಗುವ ಕಷ್ಟದ ಬಗ್ಗೆ ಸ್ಥಳೀಯರಾದ ಅಂಬೇಡ್ಕರ್ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಸಚಿವರಿಗೆ ತಿಳಿಸಿ, ಜನರ ಕಷ್ಟ ನಿವಾರಿಸಬೇಕೆಂದು ಮನವಿ ಮಾಡಿದ್ದರು. ಜನರ ಕಷ್ಟ ಅರಿತುಕೊಂಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ರವರು, ಮಿತ್ತಡ್ಕ ನ್ಯಾಯಬೆಲೆ ಅಂಗಡಿಗೆ ಬಯೋಮೆಟ್ರಿಕ್ ಅಳವಡಿಸುವಂತೆ ಆಹಾರ , ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕರಿಗೆ ಆದೇಶಿಸಿದ್ದಾರೆ.

ಈ ಹಿಂದೆ ನಡೆದ ಮರ್ಕಂಜ ಗ್ರಾಮ ಪಂಚಾಯತ್ ನ ಗ್ರಾಮ ಸಭೆಯಲ್ಲಿ ಈ ವಿಚಾರ ಬಹಳ ಚರ್ಚೆ ಗೆ ಗ್ರಾಸವಾಗಿತ್ತು.

ಈ ಹಿಂದೆ ದೂರದ ಗೋಳಿಯಡ್ಕಕ್ಕೆ ತೆರಳಿ ತಂಬ್ ಹಾಕಿ ಬರುತ್ತಿದ್ದ ಸ್ಥಳೀಯರು