ನಿರೂಪಣಾ ಕೌಶಲ್ಯ ತರಬೇತಿ ಕಾರ್ಯಕ್ರಮ

0

ಶೌರ್ಯ ಯುವತಿ ಮಂಡಲ ಇದರ ಆಶ್ರಯದಲ್ಲಿ ನಿರೂಪಣಾ ಕೌಶಲ್ಯ ತರಬೇತಿ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವತಿ ಮಂಡಲದ ಅಧ್ಯಕ್ಷರಾದ ರಾಜೀವಿ ಗೋಳ್ಯಾಡಿ ವಹಿಸಿದ್ದರು. ಉದ್ಘಾಟಕರಾಗಿ ಕಮಲಾಕ್ಷಿ ಗುಡ್ಡೆಮನೆ ಆಗಮಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಶಶಿಕಾಂತ್ ಮಿತ್ತೂರು ಇವರು ಕಾರ್ಯಕ್ರಮ ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಸಂಘದ ಸದಸ್ಯರು, ಊರಿನವರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಯಜ್ಞ ಗುಡ್ಡೆಮನೆ ಪ್ರಾರ್ಥಿಸಿದರು., ರಶ್ಮಿ ಉಮ್ಮಡ್ಕ ಸ್ವಾಗತಿಸಿ, ಸುಮಾ ದಾತಡ್ಕ ವಂದಿಸಿದರು. ಪುಷ್ಪಲತಾ ನಾಯರ್ಕಲ್ಲು ಕಾರ್ಯಕ್ರಮ ನಿರೂಪಿಸಿದರು.