ಚೊಕ್ಕಾಡಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಚುನಾವಣೆ

0

ಆಡಳಿತ ಮಂಡಳಿಗೆ
12 ಮಂದಿ ನಿರ್ದೇಶಕರ ಅವಿರೋಧ ಆಯ್ಕೆ

ಅಮರಪಡ್ನೂರು ಗ್ರಾಮದ ಚೊಕ್ಕಾಡಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಆಡಳಿತ ಮಂಡಳಿಗೆ ಅವಿರೋಧವಾಗಿ 12 ಮಂದಿ ನಿರ್ದೇಶಕರನ್ನು ಆಯ್ಕೆ ಮಾಡಲಾಗಿದೆ.
ಸಂಘದ ಆಡಳಿತ ಮಂಡಳಿಯ ಚುನಾವಣೆಯಲ್ಲಿ 12 ಮಂದಿ ನಾಮಪತ್ರ ಸಲ್ಲಿಸಿದ್ದರು. ಬಳಿಕ ಚುನಾವಣಾಧಿಕಾರಿಗಳು
ನಾಮಪತ್ರ ಪರಿಶೀಲನೆ ನಡೆಸಿ ಡಿ.3 ರಂದು ನಾಮಪತ್ರ ಹಿಂತೆಗೆತಕ್ಕೆ ಅವಕಾಶ ನೀಡಲಾಗಿತ್ತು.
ಯಾವುದೇ ನಾಮಪತ್ರ ಹಿಂತೆಗೆತವಾಗದಿರುವುದರಿಂದ ಆಡಳಿತ ಮಂಡಳಿಗೆ 12 ಮಂದಿ ನಿರ್ದೇಶಕರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಸಾಮಾನ್ಯ ಸ್ಥಾನಕ್ಕೆ ಭವ್ಯ.ಕೊರತ್ಯಡ್ಕ, ಪಿ.ಎಂ.ಪ್ರೇಮ, ಚಿತ್ರಕಲಾ ಕೆ, ಪಾರ್ವತಿ ಎನ್, ಪ್ರಸನ್ನ ಕುಮಾರಿ, ಶಶಿಕಲಾ ಪಿ, ನಂದಿನಿ ಚೆನ್ನಮಲೆ, ಶೋಭಾ ಕೆ ನಾಯ್ಕ್, ಪೂರ್ಣಿಮಾ ಎ.ವೈ, ಹಿಂದುಳಿದ ವರ್ಗ ಪ್ರವರ್ಗ ಎ ಮೀಸಲು ಸ್ಥಾನಕ್ಕೆ ಕುಸುಮಾವತಿ ಕುಬಲಾಡಿ, ಅಂಕಿತಾ ಕೆ.ಎಸ್ ಕೊಪ್ಪತ್ತಡ್ಕ,‌ಪರಿಶಿಷ್ಟ ಪಂಗಡ ಸ್ಥಾನಕ್ಕೆ ಮೀನಾಕ್ಷಿ ಕಾಯರ ರವರು ನಾಮಪತ್ರ ಸಲ್ಲಿಸಿದ್ದರು.
ಪರಿಶಿಷ್ಟ ಜಾತಿ ಮೀಸಲು ಸ್ಥಾನಕ್ಕೆ ಅರ್ಹ ಅಭ್ಯರ್ಥಿ ನಾಮಪತ್ರ ಸಲ್ಲಿಕೆಯಾಗದ ಹಿನ್ನೆಲೆಯಲ್ಲಿ 12 ಮಂದಿ ನಿರ್ದೇಶಕರನ್ನು ಮಾತ್ರ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಚುನಾವಣಾಧಿಕಾರಿ ಶಿವಲಿಂಗಯ್ಯ ಎಂ ರವರು ಆಯ್ಕೆ ಪ್ರಕ್ರಿಯೆ ನಡೆಸಿದರು.