ಸುಳ್ಯ ಸೈಂಟ್ ಜೋಸೆಫ್ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿ ಸಂಸತ್ತು ಅಧಿವೇಶನ

0

ಸುಳ್ಯ ಸೈಂಟ್ ಜೋಸೆಫ್ ಪ್ರೌಢಶಾಲೆಯಲ್ಲಿ ಶಾಲಾ ಸಂಸತ್ ಅಧಿವೇಶನ ಡಿ.05 ರಂದು ನಡೆಯಿತು. ಅಧಿವೇಶನವು 9ನೇ ತರಗತಿ ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು.
ಶಾಲಾ ಶಿಕ್ಷಕ ಪುರುಷೋತ್ತಮ. ಬಿ ಸಂಸತ್ ಅಧಿವೇಶನದಲ್ಲಿ ಸಭಾಪತಿಯ ಪಾತ್ರ, ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ಕಾರ್ಯವೈಖರಿಯ ಬಗ್ಗೆ ವಿವರಣೆಯನ್ನು ನೀಡಿದರು. ಅಧಿವೇಶನದಲ್ಲಿ ವಿರೋಧ ಪಕ್ಷದವರು,ಆಡಳಿತ ಪಕ್ಷದ ಲೋಪ ದೋಷಗಳ ಬಗ್ಗೆ ಪ್ರಶ್ನಿಸಿದರು. ಆಡಳಿತ ಪಕ್ಷದವರು ಉತ್ತರಿಸಿದರು .ಸಭಾಪತಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಗವರ್ನರ್ ಮತ್ತು ಸೆಕ್ರೆಟರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನಂತರ does school detention do any good in school. ಎಂಬ ವಿಷಯದ ಬಗ್ಗೆ ಚರ್ಚೆಯನ್ನು ಮಾಡಲಾಯಿತು.
ಮುಖ್ಯ ಶಿಕ್ಷಕಿ ಸಿಸ್ಟರ್ ಬಿನೋಮಾ ಅಧಿವೇಶನದ ಪ್ರಾಮುಖ್ಯತೆಯ ಬಗ್ಗೆ ಮತ್ತು ಶಾಲಾ ವಿದ್ಯಾರ್ಥಿಗಳಿಗೆ ಸಲಹೆ ಸೂಚನೆಗಳನ್ನು ನೀಡಿದರು. ಶಾಲಾ ಶಿಕ್ಷಕ ಪುರುಷೋತ್ತಮ ಬಿ ಮತ್ತು ಶಿಕ್ಷಕಿ ರೀಟ ಲತಾ ಕಾರ್ಯಕ್ರಮವನ್ನು ಸಂಯೋಜಿಸಿದರು ಒಂಬತ್ತನೇ ತರಗತಿಯ ಅಭಿರಾಮ ಸ್ವಾಗತಿಸಿದರು ಎಂಟನೇ ತರಗತಿ ಯ ಧನ್ವಿ ಕಾರ್ಯಕ್ರಮವನ್ನು ನಿರೂಪಿಸಿದರು.
8ನೇ ತರಗತಿ ಜೀವಿಕಾ ವಂದಿಸಿದರು . ಅಧಿವೇಶನವು ರಾಷ್ಟ್ರಗೀತೆಯೊಂದಿಗೆ ಮುಕ್ತಾಯಗೊಂಡಿತು .ಎಲ್ಲಾ ಶಿಕ್ಷಕ ವೃಂದದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.