ಕೇರ್ಪಡ: ಶ್ರೀ ಮಹಿಷಮರ್ಧಿನಿ ದೇವಸ್ಥಾನ ಜಾತ್ರೋತ್ಸವ ಚಾಲನೆ ; ಗೊನೆ ಮುಹೂರ್ತ

0

ಎಡಮಂಗಲ ಗ್ರಾಮದ ಕೇರ್ಪಡ ಶ್ರೀ ಮಹಿಷಮರ್ಧಿನಿ ದೇವಸ್ಥಾನದಲ್ಲಿ ಡಿ.15- 16 ರಂದು ಜಾತ್ರೋತ್ಸವದ ಅಂಗವಾಗಿ ಮಹಾಪೂಜೆಯ ಬಳಿಕ ಸಾಮೂಹಿಕ ಪ್ರಾರ್ಥನೆಯ ನಂತರ ಕೇರ್ಪಡ ಗೀತಾ ಮೇದಪ್ಪ ಗೌಡರ ಮನೆಯ ತೋಟದಲ್ಲಿ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಗೊನೆಯಕಡಿಯುವುದರ ಮೂಲ ಕಲ ದೇವಳದ ಪ್ರಧಾನ ಅರ್ಚಕ ಶ್ರೀಹರಿ ಕಂಜೂರಾಯರು ಜಾತ್ರೋತ್ಸವಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿ ಪ್ರಧಾನ ಕಾರ್ಯದರ್ಶಿ ವೆಂಕಪ್ಪಗೌಡ ಆಲಾಜೆ , ಸದಸ್ಯರಾದ ನಾಗೇಶ್ ಆಳ್ವ, ಮಹಿಳಾ ಸೇವಾ ಸಮಿತಿ ಅಧ್ಯಕ್ಷೆ ಗುಣಾವತಿ ನಾವೂರು, ಕೇರ್ಪಡ ಗೌಡ ಮನೆತನದ ಭಂಡಾರ ಮನೆಯ ಚೆನ್ನಪ್ಪ ಗೌಡ, ರಕ್ತೇಶ್ವರಿ ದೈವದ ಪರಿಚಾರಕ ಚಂದ್ರಶೇಖರ ಕೆ .ಎಸ್, ಬಾಲಕೃಷ್ಣ ನಾಗನಕಜೆ ,ಚಂದ್ರಶೇಖರ ಬೊಳ್ಳಜೆ ,ಗಂಗಾಧರ ಪಂಡಿತ್ ,ಜಯಂತ ಎಂಜೀರ್ , ಮೋಹನ್ ಕುಮಾರ್ , ಇನ್ನಿತರರು ಉಪಸ್ಥಿತರಿದ್ದರು.