ಇಂದು ಸುಳ್ಯದಲ್ಲಿ 29 ನೇ ವರ್ಷದ ಅಯ್ಯಪ್ಪ ದೀಪೋತ್ಸವ

0

ಸುಳ್ಯ ಸಾರ್ವಜನಿಕ ಶ್ರೀ ಅಯ್ಯಪ್ಪ ಸೇವಾ ಸಮಿತಿ ಇದರ ಆಶ್ರಯದಲ್ಲಿ 29 ನೇ ವರ್ಷದ ಅಯ್ಯಪ್ಪ ದೀಪೋತ್ಸವವು ಇಂದು ಸುಳ್ಯದ ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಭಾಗದ ಅಯ್ಯಪ್ಪನ ದಿವ್ಯ ಮಂಟಪದಲ್ಲಿ ನಡೆಯಲಿರುವುದು. ಪ್ರಾತ:ಕಾಲ ಗಣಪತಿ ಹವನವಾಗಿ ಉಷಾ ಪೂಜೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿದೆ. ಮಧ್ಯಾಹ್ನ ಮಹಾಪೂಜೆಯ ನಂತರ ಸಾರ್ವಜನಿಕ ಅನ್ನಸಂಪರ್ಪಣೆಯು ನಡೆಯಲಿರುವುದು.


ಸಂಜೆ ಹಳಗೇಟಿನಿಂದ ಪಾಲ್ ಕೊಂಬು ಮೆರವಣಿಗೆಯು ಸಾಗಿ ಬರಲಿದೆ. ಕಲಾ ವೇದಿಕೆಯಲ್ಲಿ ಭಕ್ತಿ ಗಾನ ಸುಧಾ ಕಾರ್ಯಕ್ರಮವು ನಡೆಯಲಿರುವುದು. ರಾತ್ರಿ ಯಕ್ಷಗಾನ ಬಯಲಾಟ ಹಾಗೂ ನಾಳೆ ಪ್ರಾತ:ಕಾಲ ಅಯ್ಯಪ್ಪ ವೃತಧಾರಿಗಳಿಂದ ಅಗ್ನಿಸೇವೆಯು ನಡೆಯಲಿದೆ.