ಡಿ.18: ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಚಂಪಾಷಷ್ಠಿ ಮಹೋತ್ಸವ

0

ಜಾಲ್ಸೂರು ಗ್ರಾಮದ ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ವರ್ಷಂಪ್ರತಿ ಜರುಗುವ ಚಂಪಾಷಷ್ಠಿ ಮಹೋತ್ಸವವು ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿಯವರ ನೇತೃತ್ವದಲ್ಲಿ ಡಿ.18ರಂದು ಜರುಗಲಿದೆ.

ಬೆಳಿಗ್ಗೆ 9ರಿಂದ ಶ್ರೀ ಗಣಪತಿ ಹೋಮ, ನವಕ ಪೂಜೆ, ಪಂಚಾಮೃತಾಭಿಷೇಕ, ನವಕಾಭಿಷೇಕ, ಮಧ್ಯಾಹ್ನ 12.30ರಿಂದ ಶ್ರೀ ಸುಬ್ರಹ್ಮಣ್ಯ ಸ್ವಾಮಿಗೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರುಗಲಿದೆ.

ರಾತ್ರಿ 7ರಿಂದ ದೀಪಾರಾಧನೆ, ಮಂಗಳಾರತಿ, ಶ್ರೀ ರಕ್ತೇಶ್ವರಿ ತಂಬಿಲ, ಪ್ರಸಾದ ವಿತರಣೆ ಜರುಗಲಿದೆ. ದೇವಸ್ಥಾನದಲ್ಲಿ ಕಿರುಷಷ್ಠಿ ಮಹೋತ್ಸವವು ಜ.16ರಂದು ಜರುಗಲಿದೆ.