ಉಬರಡ್ಕ: ನೇಣುಬಿಗಿದು ಆತ್ಮಹತ್ಯೆ

0

ಉಬರಡ್ಕ ಮಿತ್ತೂರು ಗ್ರಾಮದ ಭರ್ಜರಿಗುಂಡಿ ಬಾಬು ನಾಯ್ಕರವರ ಪುತ್ರ ಸತೀಶ್ ರವರು ಮನೆಯ ಪಕ್ಕದ ಗುಡ್ಡದಲ್ಲಿ ಮರಕ್ಕೆ ನೇಣುಬಿಗಿದು ಡಿ.10 ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆತ್ಮಹತ್ಯೆ ಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಮೃತದೇಹವನ್ನು ಸುಳ್ಯದ ಸರಕಾರಿ ಆಸ್ಪತ್ರೆಗೆ ಕರತರಲಾಗಿದೆ.
ಮೃತರು ತಂದೆ ಬಾಬು ನಾಯ್ಕ, ತಾಯಿ ಶ್ರೀಮತಿ ಸರಸ್ವತಿ ಪತ್ನಿ ಶ್ರೀಮತಿ ವಿದ್ಯಾಶ್ರೀ, ಪುತ್ರರಾದ ಪವನ್ ಮತ್ತು ಮದನ್ ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.