ಇಂದು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಲಕ್ಷ ದೀಪೋತ್ಸವ ಸಂಭ್ರಮ

0

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಇಂದು ಶ್ರೀ ದೇವರ ಲಕ್ಷದೀಪೋತ್ಸವ ನೆರವೇರಲಿದೆ.

ಲಕ್ಷದೀಪೋತ್ಸವದೊಂದಿಗೆ ವಿವಿಧ ಭಜನಾ ತಂಡಗಳಿಂದ ಕುಣಿತ ಭಜನೆ ನಡೆಯಲಿದೆ. 2000 ಕ್ಕೂ ಅಧಿಕ ಭಜಕರು ಇದರಲ್ಲಿ ಭಾಗವಹಿಸಲಿದ್ದಾರೆ.

ಅಲ್ಲದೆ ಇಂದು ರಥಬೀದಿಯಲ್ಲಿ ಶ್ರೀ ದೇವರ ರಥೋತ್ಸವ ಆರಂಭವಾಗಲಿದೆ. ರಾತ್ರಿ ಪಂಚ ಶಿಖರಗಳನ್ನೊಳಗೊಂಡ ಚಂದ್ರಮಂಡಲೋತ್ಸವ ನೆರವೇರಲಿದೆ.

ಇಂದಿನಿಂದ ಬೀದಿ ಉರುಳು ಸೇವೆ ಆರಂಭವಾಗಲಿದ್ದು ಲಕ್ಷದೀಪೋತ್ಸವ ರಥೋತ್ಸವದ ಬಳಿಕ ಆರಂಭಿಸಿ ಚಂಪಾಷಷ್ಠಿ ಮಹಾರಥೋತ್ಸವದ ತನಕ ಸೇವೆ ನೆರವೇರಲಿದೆ.

ಇಂದಿನ ಲಕ್ಷ ದೀಪೋತ್ಸವ, ಕುಣಿತ ಭಜನಾ ಕಾರ್ಯಕ್ರಮ ಸುದ್ದಿ ಯೂಟೂಬ್ ಚಾನೆಲ್ ನಲ್ಲಿ ನೇರ ಪ್ರಸಾರವಾಗಲಿದೆ