ಗಾಳಿಯಲ್ಲಿ ತೇಲಿದ ಕಲ್ಲು ! – ವಿಚಿತ್ರ ; ಆದರೂ ಸತ್ಯ

0

ತಂಟೆಪ್ಪಾಡಿಯಲ್ಲಿ ಕಂಡು ಬಂದ ದೃಶ್ಯವನ್ನು ಸೆರೆ ಹಿಡಿದ ವಿದ್ಯಾರ್ಥಿನಿ

ಕಳಂಜ ಗ್ರಾಮದ ತಂಟೆಪ್ಪಾಡಿಯಲ್ಲಿ ಘಟಿಸಿದ ವಿಚಿತ್ರ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ.‌

ಜಲ್ಲಿ ಕಲ್ಲೊಂದು ಗಾಳಿಯಲ್ಲಿ ತೇಲಿದ ಘಟನೆ ನಡೆದಿದ್ದು, ಕಾಲೇಜು ವಿದ್ಯಾರ್ಥಿನಿಯೋರ್ವರು ಈ ದೃಶ್ಯವನ್ನು ಸೆರೆ ಹಿಡಿದಿದ್ದಾರೆ.

ತಂಟೆಪ್ಪಾಡಿ ಪುಟ್ಟಣ್ಣ ಗೌಡ ಅವರ ಪುತ್ರಿ ಧನುಶ್ರೀ ಕೆಲವು ದಿನಗಳ ಹಿಂದೆ ಬೆಳಗ್ಗೆ 7 ಗಂಟೆ ಸುಮಾರಿಗೆ ಪುತ್ತೂರಿಗೆ ಕಾಲೇಜಿಗೆಂದು ತೆರಳುತ್ತಿರುವಾಗ ರಸ್ತೆಯಲ್ಲಿ ಜಲ್ಲಿ ಕಲ್ಲೊಂದು ತೇಲಾಡುವ ದೃಶ್ಯ ಕಂಡು ಬಂದಿದೆ.‌ ಕೂಡಲೇ ಆಕೆ ಈ ದೃಶ್ಯವನ್ನು ತನ್ನ ಮೊಬೈಲ್ ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ.‌ ” ಕೆಲವು ಸೆಕುಂಡುಗಳಷ್ಟೇ ಹಾರಾಡಿದೆ ಕಲ್ಲು ಮತ್ತೆ ರಸ್ತೆಗೆ ಬಿತ್ತು ” ಎಂದು ಆಕೆ ಸುದ್ದಿಗೆ ತಿಳಿಸಿದ್ದಾರೆ. ಈ ವೀಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ಇದರ ಸಾಧ್ಯಾಸಾಧ್ಯತೆಯ ಬಗ್ಗೆ ಚರ್ಚೆ ಶುರುವಾಗಿದೆ.