ನವೀನ್ ಕುಮಾರ್ ಕೊಟ್ಟೆಕಾಯಿಯವರ ಸಂಶೋಧನಾ ಪತ್ರಕ್ಕೆ ಬೆಸ್ಟ್ ಬಿಸಿನೆಸ್ ಅಕಾಡೆಮಿಕ್ ವರ್ಷದ ವ್ಯಕ್ತಿ 2023 ಪ್ರಶಸ್ತಿ ಹಾಗೂ ಚಿನ್ನದ ಪದಕ

0

ಡಿ.13ರಿಂದ ಡಿ. 15 ರಂದು ನಡೆದ 74 ನೇ ಅಖಿಲ ಭಾರತ ವಾಣಿಜ್ಯ ಸಮ್ಮೇಳನದಲ್ಲಿ ಬೆಳ್ಳಾರೆಯ ನವೀನ್ ಕುಮಾರ್ ಕೊಟ್ಟೆಕಾಯಿಯವರು ಮಂಡಿಸಿದ ಸಂಶೋಧನಾ ಪತ್ರಕ್ಕೆ ಚಿನ್ನದ ಪದಕದೊಂದಿಗೆ ಬೆಸ್ಟ್ ಬಿಸಿನೆಸ್ ಅಕಾಡೆಮಿಕ್ ವರ್ಷದ ವ್ಯಕ್ತಿ 2023′ ಪ್ರಶಸ್ತಿ ಲಭಿಸಿದೆ.

ಸುಳ್ಯ ತಾಲೂಕಿನ ಪೆರುವಾಜೆ ಗ್ರಾಮದ ಕೊಟ್ಟೆಕಾಯಿ ರಾಮ ನಾಯ್ಕ ಹಾಗು ಶ್ರೀಮತಿ ಗೀತಾ ರವರ ಪುತ್ರರಾಗಿರುವ ನವೀನ್ ಕುಮಾರ್ ಅವರು ಪ್ರಸ್ತುತ ಮಂಗಳೂರು ಮಂಗಳ ಗಂಗೋತ್ರಿ ವಿಶ್ವ ವಿದ್ಯಾನಿಲಯದ ವಾಣಿಜ್ಯ ವಿಭಾಗದಲ್ಲಿ ಪ್ರೋ. ಈಶ್ವರ ಪಿ. ಇವರ ಮಾರ್ಗದರ್ಶನದಲ್ಲಿ ಪಿ.ಹೆಚ್. ಡಿ. ಅಧ್ಯಯನ ನಡೆಸುತ್ತಿದ್ದಾರೆ.

ನವೀನ್ ಕುಮಾರ್ ಅವರ ಪತ್ನಿ ಶ್ರೀಮತಿ ರಮ್ಯ ಮುಂಡೋಕಜೆ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.