ವಿನೋಬನಗರ: ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಕೆವಿಜಿ ಸಾಧನೆ -ಸಂಸ್ಮರಣೆ

0

ಜಾಲ್ಸೂರು ಗ್ರಾಮದ ವಿನೋಬನಗರದ ವಿವೇಕಾನಂದ ಆಂಗ್ಲ ಮಾದ್ಯಮ ಪ್ರೌಢಶಾಲೆಯಲ್ಲಿ ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ಸುಳ್ಯದ ಅಮರ ಶಿಲ್ಪಿ ದಿ. ಡಾ. ಕುರುಂಜಿ ವೆಂಕಟರಮಣ ಗೌಡರ 95ನೇ ಜಯಂತೋತ್ಸವ ,ಪ್ರಯುಕ್ತ ಕೆವಿಜಿ ಸಂಸ್ಮರಣೆ ಕಾರ್ಯಕ್ರಮವು ಡಿ.16ರಂದು ಜರುಗಿತು.

ಕೆವಿಜಿ ಅವರ ಸಾಧನೆ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಕು. ಬೇಬಿ ವಿದ್ಯಾ ಇವರು ಮಾತನಾಡಿದರು.


ಈ ಸಂದರ್ಭದಲ್ಲಿ ಶಾಲಾ ಸಂಚಾಲಕ ಸುಧಾಕರ ಕಾಮತ್ ವಿನೋಬನಗರ, ಕಾರ್ಯಕ್ರಮ ನಿರ್ದೇಶಕರಾದ ಚಂದ್ರಕುಮಾರ್ ಕುತ್ಯಾಳ, ಶಾಲಾ ಮುಖ್ಯೋಪಾಧ್ಯಾಯ ಗಿರೀಶ್ ಕುಮಾರ್ ಎ, ಉಪಸ್ಥಿತರಿದ್ದರು.