ಸವಣೂರು ವಿದ್ಯಾರಶ್ಮಿ ವಿದ್ಯಾಲಯದಲ್ಲಿ ವಾರ್ಷಿಕೋತ್ಸವ “ಸಂಭ್ರಮ ರಶ್ಮಿ”

0

ರಾಜ್ಯ ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತರಾದ ಸವಣೂರಿನ ಶಿಲ್ಪಿ ಸವಣೂರು ಕೆ. ಸೀತಾರಾಮ ರೈಯವರ ಸಂಚಾಲಕತ್ವದಲ್ಲಿ ಮುನ್ನಡೆಯುತ್ತಿರುವ ಸವಣೂರಿನ ವಿದ್ಯಾರಶ್ಮಿ ಸಮೂಹ ವಿದ್ಯಾಸಂಸ್ಥೆಗಳ ವಾರ್ಷಿಕೋತ್ಸವ “ಸಂಭ್ರಮ ರಶ್ಮಿ” ಡಿ. 16ರಂದು ಸಂಜೆ ನಡೆಯಿತು. ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಯುವರಾಜ ಜೈನ್, ಮಂಗಳೂರು ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷ ಕೃಷ್ಣರಾಜ್ ಹೆಗ್ಡೆ ಅತಿಥಿಗಳಾಗಿ ಭಾಗವಹಿಸಿದ್ದರು. ವಿದ್ಯಾರಶ್ಮಿ ವಿದ್ಯಾಸಂಸ್ಥೆಗಳ ಸಂಚಾಕರಾದ ಸವಣೂರು ಕೆ. ಸೀತಾರಾಮ ರೈ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಸಂಸ್ಥೆಯ ಪ್ರಾಂಶುಪಾಲರಾದ ಸೀತಾರಾಮ ಕೇವಳ ಸಂಸ್ಥೆಯ ವಾರ್ಷಿಕ ವರದಿ ವಾಚಿಸಿದರು. ಆಡಳಿತಾಧಿಕಾರಿ ಅಶ್ವಿನ್ ಎಲ್. ಶೆಟ್ಟಿ, ಶ್ರೀಮತಿ ರಶ್ಮಿ ಅಶ್ವಿನ್ ಶೆಟ್ಟಿ, ಎಸ್.ಡಿ.ಎಂ.ಸಿ. ಅಧ್ಯಕ್ಷ ರಾಂಪ್ರಸಾದ್, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ನಾರಾಯಣ ಮೂರ್ತಿ, ಎಸ್.ಎನ್‌.ಆರ್. ರೂರಲ್ ಎಜುಕೇಶನ್ ನ ಟ್ರಸ್ಟಿ ಸುಂದರ ರೈ, ವಿದ್ಯಾರ್ಥಿ ನಾಯಕ ದೀಪಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಕು. ತೃಷಾ, ಆಯಿಷತ್ ವಫಾ ಕಾರ್ಯಕ್ರಮ ನಿರೂಪಿಸಿದರು. ಬೋಧಕರಾದ ಪರಿಮಳ, ಮುರಳೀಧರ, ತೇಜಸ್ವಿನಿ ರೈ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ವಿದ್ಯಾರ್ಥಿನಿಯರಾದ ಕು. ಗೌತಮಿ ಕೆ, ಕು. ಆಯಿಷತ್ ಹನ್ನ ಅತಿಥಿಗಳನ್ನು ಪರಿಚಯಿಸಿದರು.

ನಾವು ಎಷ್ಟು ದಿನ ಬದುಕುತ್ತೇವೆ ಎನ್ನುವಂತದ್ದು ಮುಖ್ಯ ಅಲ್ಲ. ಹೇಗೆ ಬದುಕಿದ್ದೇವೆ ಎಂಬುದು ಮುಖ್ಯ. ಯಾವ ವ್ಯಕ್ತಿ ಅವನಿಗೋಸ್ಕರ ಬದುಕುತ್ತಾನೋ ಅವನ ಫೊಟೊ ಅವನ ಮನೆಯಲ್ಲಿ ಮಾತ್ರ ಇರುತ್ತದೆ. ಸಮಾಜಮುಖಿ ಕೆಲಸ ಮಾಡಿದ ವ್ಯಕ್ತಿಯ ಫೊಟೊ ಸಮಾಜದ ಎಲ್ಲರ ಹೃದಯದಲ್ಲಿ ಇರುತ್ತದೆ. ಎಲ್ಲರ ಹೃದಯದಲ್ಲಿ ಉಳಿಯುವಂತ ಕೆಲಸವನ್ನು ಸಮಾಜಸೇವೆಯ ಮೂಲಕ ಸೀತಾರಾಮ ರೈಯವರು ಮಾಡುತ್ತಿದ್ದಾರೆ -ಯುವರಾಜ್ ಜೈನ್

ವಿದ್ಯೆಯ ಜೊತೆಗೆ ವಿನಯವನ್ನು ಬೆಳೆಸಿಕೊಂಡರೆ ಮಾತ್ರ ಜೀವನಕ್ಕೆ ಮೌಲ್ಯ ಬರುತ್ತದೆ. ತಾನು ಬದುಕುವುದರ ಜೊತೆಗೆ ಇತರರಿಗೆ ಬದುಕನ್ನು ಕಟ್ಟಿಕೊಟ್ಟವರು ಸೀತಾರಾಮ ರೈಯವರು. ಶಿಕ್ಷಕರಾಗಿ, ಶಿಕ್ಷಣದ ಮೂಲಕ ಸಮಾಜದ ಬದಲಾವಣೆಯನ್ನು ಬಯಸಿದ್ದ ತಮ್ಮ ತಂದೆ ನಿವೃತ್ತ ಸೇನಾನಿ ಶೀಂಟೂರು ನಾರಾಯಣ ರೈಯವರ ಕನಸ್ಸನ್ನು ನನಸಾಗಿಸಿ ಸಮಾಜಕ್ಕೆ ಮಾದರಿಯಾದವರು ರೈಯವರು – ಕೃಷ್ಣರಾಜ್ ಹೆಗ್ಡೆ