ಬೆಳ್ಳಾರೆ ಜ್ಞಾನದೀಪ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿ ಸಂಸ್ಥೆಗೆ ವಿಶ್ವ ಕೌಶಲ್ಯ ಮಂಡಳಿಯಿಂದ ಮಾನ್ಯತೆ

0

ಭಾರತ ಸರಕಾರದ ಅಭಿವೃದ್ಧಿ ಏಜನ್ಸಿಯಿಂದ ಪ್ರವರ್ತಿತ ಭಾರತ್ ಸೇವಕ ಸಮಾಜದ ಅಂಗೀಕೃತ ಸಂಸ್ಥೆಯಾದ ಬೆಳ್ಳಾರೆಯ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿ ಸಂಸ್ಥೆಗೆ ಬ್ರಿಟನ್ ರಾಜಧಾನಿ ಲಂಡನ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಕೌಶಲ್ಯ ಶಿಕ್ಷಣದ ಜಾಗತಿಕ ಪ್ರವರ್ತಕ ವಿಶ್ವ ಕೌಶಲ್ಯ ಮಂಡಳಿಯ(ವರ್ಲ್ಡ್ ಸ್ಕಿಲ್ ಕೌನ್ಸಿಲ್) ಮಾನ್ಯತೆ ಲಭಿಸಿದೆ.

ಭಾರತ್ ಸೇವಕ್ ಸಮಾಜವು ತನ್ನ ಎಲ್ಲಾ ಕೋರ್ಸ್ ಗಳನ್ನು ಇನ್ನು ಮುಂದೆ ವಿಶ್ವ ಕೌಶಲ್ಯ ಮಂಡಳಿಯ ಸಹಯೋಗದೊಂದಿಗೆ ನಡೆಸಲಿದ್ದು, ಇದರ ವತಿಯಿಂದ ಜ್ಞಾನದೀಪ ಸಂಸ್ಥೆಯಲ್ಲಿ ನಡೆಯುತ್ತಿರುವ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿಯ ಪ್ರಮಾಣ ಪತ್ರವು ಅಂತಾರಾಷ್ಟ್ರೀಯ ಮಾನ್ಯತೆಯನ್ನು ಪಡೆಯಲಿದೆ.