ಕಡಬದಲ್ಲಿ ಕಾರು ಮತ್ತು ಸ್ಕೂಟರ್ ನಡುವೆ ಅಪಘಾತ,ಸ್ಕೂಟರ್ ನಲ್ಲಿದ್ದ ಶಾಲಾ ಬಾಲಕ ಸ್ಥಳದಲ್ಲೇ ಮೃತ್ಯು,ಇಬ್ಬರರಿಗೆ ಗಂಭೀರ ಗಾಯ

0

ಕಡಬ ಕಳಾರ ಮಸೀದಿ ಸಮೀಪ ತಡ ರಾತ್ರಿ ಕಾರು ಮತ್ತು ಸ್ಕೂಟರ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಶಾಲಾ ಬಾಲಕನೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ಡಿ.13 ರ ನಡೆದಿದೆ.

ಮೃತ ಬಾಲಕ ಮುರುಳ್ಯ ಗ್ರಾಮದ ಚಂದ್ರಶೇಖರ ರೈ ಅವರ ಪುತ್ರ ಬಿಪಿನ್ ರೈ 13 ವರ್ಷ ಎಂದು ತಿಳಿದು ಬಂದಿದೆ. ಈ ಅಪಘಾತದಲ್ಲಿ ಮೃತ ಬಾಲಕನ ತಂದೆ ಚಂದ್ರಶೇಖರ ರೈ ಸಹೋದರಿ ಆತ್ಮೀ ಸಿ ರೈ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಸರಸ್ವತಿ ಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಚಂದ್ರಶೇಖರ ರವರು ತಮ್ಮ ಜ್ಯುಪೀಟರ್ ಸ್ಕೂಟರ್ ನಲ್ಲಿ ವಾಪಸ್ ಆಗುತ್ತಿದ್ದ ವೇಳೆ ಕಡಬ ಗ್ರಾಮದ ಕಳಾರ ಮಸೀದಿ ಬಳಿ ಇದೇ ಮಾರ್ಗವಾಗಿ ಬಂದ ಕೆ ಎ 09 ಎಂ ಬಿ 5163 ನಂಬರ್ ನ ನ್ಯಾನೋ ಕಾರು ಡಿಕ್ಕಿ ಸಂಭವಿಸಿದ್ದು ಅಪಘಾತದ ಸಂದರ್ಭ ಚಂದ್ರಶೇಖರ ಮತ್ತು ಹಿಂಬದಿಯಲ್ಲಿ ಕುಳಿತಿದ್ದ ಇಬ್ಬರು ಮಕ್ಕಳು ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡಿರುತ್ತಾರೆ.ಈ ವೇಳೆ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವ ಸಂದರ್ಭ ಬಿಪಿನ್ ರೈ ಮೃತ ಪಟ್ಟಿದ್ದು ಗಾಯಾಳುಗಳನ್ನು ಕಡಬ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಆತ್ಮೀ ಸಿ ರೈ ಮತ್ತು ಚಂದ್ರಶೇಖರ್ ರವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಕಾರು ಪಂಜ ನಿವಾಸಿ ಪರಮೇಶ್ವರ ಭಟ್ ಎಂಬವರದ್ದು ಎನ್ನಲಾಗಿದ್ದು ಅವರು ಉಪ್ಪಿನಂಗಡಿಯಿಂದ ಪಂಜದತ್ತ ಬರುತ್ತಿದ್ದರು ಎನ್ನಲಾಗಿದೆ.

ಕಡಬ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಚಂದ್ರಶೇಖರ್ ಅವರು ನೀಡಿದ ದೂರಿನ ಅನ್ವಯ ಕಾರು ಚಾಲಕ ಪರಮೇಶ್ವರ ಭಟ್ ರವರ ಮೇಲೆ ಅ. ಕ್ರ :106/2023 ಕಲಂ :279,337, 304(A) ಐಪಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.