ಡಾ lರವಿಕಕ್ಕೆಪದವು ಸೇವಾ ಟ್ರಸ್ಟ್ ವತಿಯಿಂದ ಕುಕ್ಕೆ ದೇವಳಕ್ಕೆ ಹೊರ ಕಾಣಿಕೆ ಅರ್ಪಣೆ

0

ಕುಕ್ಕೆಶ್ರೀ ಸುಬ್ರಹ್ಮಣ್ಯ ಚಂಪಾಸಷ್ಟಿ ಜಾತ್ರೋತ್ಸವದ ಅಂಗವಾಗಿ ಡಾl ರವಿ ಕಕ್ಕೆ ಪದವು ಸೇವಾ ಟ್ರಸ್ಟ್ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಅಕ್ಕಿ ತೆಂಗಿನಕಾಯಿ, ಬಾಳೆಗೊನೆ ಸಿಯಾಳ ಹಿಂಗಾರ ಅಡಿಕೆಗೊನೆ ಮುಂತಾದವುಗಳನ್ನು ಹಸಿರು ಕಾಣಿಕೆಯಲ್ಲಿ ತರಲಾಯಿತು .

ಶ್ರೀ ದೇವಳದ ಪರವಾಗಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ ಕಾರ್ಯನಿರ್ವಹಣಾಧಿಕಾರಿ ಡಾ ನಿಂಗಯ್ಯ ಹಸಿರು ಕಾಣಿಕೆಗಳನ್ನ ಸ್ವೀಕರಿಸಿ ಫೆಬ್ರವರಿ 4. 2024 ರಂದು ನಡೆಯುವ ರಾಜ್ಯಮಟ್ಟದ ಅರ್ಜುನ್ ಕಬಡ್ಡಿ ಕರಪತ್ರಗಳನ್ನು ಬಿಡುಗಡೆಗೊಳಿಸಿದ್ದರು .

ಈ ಸಂದರ್ಭದಲ್ಲಿ ಹರೀಶ ಇಂಜಾಡಿ, ಶ್ರೀ ವತ್ಸ ,ಸುಬ್ರಹ್ಮಣ್ಯ ಭಟ್, ಸುರೇಶ್ ಭಟ್ ,ಯಜ್ಞೇಶ ಆಚಾರ್, ಸೋಮಶೇಖರ ನಾಯಕ್,ಬಿ. ಎಂ ಎಸ್ ಆಟೋ ಮಾಲಕ ಸಂಘದ ಅಧ್ಯಕ್ಷರು ದಿನೇಶ್, ಜನಾರ್ಧನ ,ವಸತೀಶ್ ಕೂಜುಗೋಡು, ಬೆಳ್ಳಿ ಕುಕ್ಕೆ, ರವಿ ಕಕ್ಕೆ ಪದವು ಸೇವಾ ಟ್ರಸ್ಟ್ ನ ಸುಮಾರು 60 ಸ್ವಯಂಸೇವಕರು ,ಡಾl ರವಿಕಕ್ಕೆ ಪದವು ಅವರ ಪತ್ನಿ ಶ್ರೀಮತಿ ಗೀತಾ ರವಿ ಕಕ್ಕೆ ಪದವು ಪುತ್ರರಾದ ಕಾರ್ತಿಕ್, ಗಣೇಶ್, ಸುಬ್ರಮಣ್ಯ, ಪುತ್ರಿ ಅಮೃತ ಹಾಗೂ ಸೇವಾ ಟ್ರಸ್ಟ್ ನ ಪುಷ್ಪ ಕೃಷ್ಣಮೂರ್ತಿ, ಚಂದ್ರಕಲಾ, ಜಯಶ್ರೀ ,ಮಣಿಕಂಠ ,ಸೌಮ್ಯ, ಮುಂತಾದರು ಉಪಸ್ಥಿತರಿದ್ದರು.