ಬೆಳ್ಳಾರೆ ಧನಲಕ್ಷ್ಮೀ ಗೊಂಚಲು ಸಮಿತಿಯ ಮಹಾಸಭೆ – ಪದಾಧಿಕಾರಿಗಳ ಆಯ್ಕೆ

0

ಧನಲಕ್ಷ್ಮಿ ಶ್ರೀ ಗೊಂಚಲು ಸಮಿತಿ ಬೆಳ್ಳಾರೆ ಇದರ ವಾರ್ಷಿಕ ಮಹಾಸಭೆಯು ಡಿ.16 ರಂದು ನಡೆಯಿತು. ಸಭಾ ಕಾರ್ಯಕ್ರಮದಲ್ಲಿ ಶ್ರೀಮತಿ ಉಷಾ ವಲಯ ಮೇಲ್ವಿಚಾರಕರು ,ಬೆಳ್ಳಾರೆ ಆರಕ್ಷಕ ಠಾಣಾ ಎ ಎಸ್ ಐ ದಾಮೋದರ್ , ಕಾನ್ಸ್ಟೇಬಲ್ ಪೂಜಾ ಇವರು ಲಿಂಗಧಾರಿತ ದೌರ್ಜನ್ಯದ ಬಗ್ಗೆ ಮಾಹಿತಿಯನ್ನು ನೀಡಿದರು.

2024-25 25ರ ನೂತನ ಧನಲಕ್ಷ್ಮಿ ಗೊಂಚಲಿನ ಅಧ್ಯಕ್ಷರಾಗಿ ನಿಶ್ಮಿತಾ ಶ್ರೀಧತ್ತ ಸ್ತ್ರೀ ಶಕ್ತಿ ಸಂಘ ಮಾಸ್ತಿಕಟ್ಟೆ, ಉಪಾಧ್ಯಕ್ಷರಾಗಿ ಪೂರ್ಣಿಮಾ ಶ್ರೀ ಶಕ್ತಿ ಸಂಘ ನೆಟ್ಟಾರು ಕಾರ್ಯದರ್ಶಿಯಾಗಿ ಗೀತಾ ಪೆರುವಾಜೆ, ಜೊತೆ ಕಾರ್ಯದರ್ಶಿಯಾಗಿ ವಸಂತಿ ,ಭಾಗ್ಯಶ್ರೀ ಪಾಟಾಜೆ ಆಯ್ಕೆಯಾದರು.


ದೇವಕಿ ಪೆರುವಾಜೆ ಸ್ವಾಗತಿಸಿ, ಪೂರ್ಣಿಮಾ ನೆಟ್ಟಾರು ಮತ್ತು ತಂಡ ಪ್ರಾರ್ಥಿಸಿದರು . ಶ್ರೀಮತಿ ವಸಂತಿ ಧನ್ಯವಾದಗೈದರು. ನಿಶ್ಮಿತ ಇವರು ನಿರೂಪಿಸಿದರು.