ಪಯಸ್ಸಿನಿ ನದಿಗೆ ತ್ಯಾಜ್ಯ ಹಾಕಲು ವೆಂಕಪ್ಪ ಗೌಡರು ಹೇಳಿದ್ದಲ್ಲ : ಗುತ್ತಿಗೆದಾರ ಕುಮಾರ್ ಸ್ಪಷ್ಟನೆ

0

ಸುಳ್ಯದ ಗುಂಪು ಆಲೆಟ್ಟಿ ರಸ್ತೆ ಬದಿಯ ಚರಂಡಿಯಿಂದ ಕಸ ಹಾಗೂ ತ್ಯಾಜ್ಯವನ್ನು ತೆಗೆಯಲು ಗುತ್ತಿಗೆಯನ್ನು ನಾನು ಸುಳ್ಯ ನಗರ ಪಂಚಾಯತಿಯಿಂದ ಪಡೆದುಕೊಂಡಿದ್ದೆ. ಕಳೆದ ಎರಡು ದಿನಗಳ ಹಿಂದೆ ಇದೇ ಸುಳ್ಯ ನಗರದ ಗುಂಪು ರಸ್ತೆ ಬದಿಯ ಚರಂಡಿಯಿಂದ ತ್ಯಾಜ್ಯವನ್ನು ತೆಗೆದು ಟ್ರ್ಯಾಕ್ಟರ್ ಮೂಲಕ ಪಯಸ್ವಿನಿ ನದಿಯ ತೀರದಲ್ಲಿ ನನಗೆ ತಿಳಿಯದೆ ಟ್ರ್ಯಾಕ್ಟರ್ ಚಾಲಕ ಹಾಕಿರುವುದು ಹೌದು. ನನಗೆ ಸುಳ್ಯ ನಗರ ಪಂಚಾಯತ್ ಸದಸ್ಯರಾದ ಎಂ. ವೆಂಕಪ್ಪ ಗೌಡರು ಯಾವುದೇ ಕಸ ತ್ಯಾಜ್ಯವನ್ನು ಆಲೆಟ್ಟಿಯ ಪಯಸ್ವಿನಿ ತೀರದಲ್ಲಿ ಹಾಕಲು ಹೇಳಿಲ್ಲ. ವೆಂಕಪ್ಪ ಗೌಡರ ವಾರ್ಡ್ ಹೆಸರನ್ನು ಕೇಳುವಲ್ಲಿ ತಪ್ಪಾಗಿ ಎಂ
ವೆಂಕಪ್ಪ ಗೌಡರ ಹೆಸರನ್ನು ಹೇಳಿದ್ದೇನೆ.

ಗ್ರಾಮ ಪಂಚಾಯತ್ ಗೆ ಈ ಬಗ್ಗೆ ದೂರು ದಾಖಲಾಗಿರುವ ವಿಚಾರ ನನಗೆ ತಿಳಿದು ನಾನು ಆಲೆಟ್ಟಿ ಗ್ರಾಮ ಪಂಚಾಯತ್ ಗೆ ತೆರಳಿ ಮಾಡಿರುವ ತಪ್ಪನ್ನು ಒಪ್ಪಿಕೊಂಡು ದಂಡ ಪಾವತಿ ಮಾಡಿದ್ದೇನೆ ಎಂದು ಅವರು ಹೇಳಿದ್ದಾರೆ.