ಪೆರುವಾಜೆ ಜಾತ್ರೆ ಹಾಗೂ ನೂತನ ಬ್ರಹ್ಮರಥ ಸಮರ್ಪಣೆಯ ಆಮಂತ್ರಣ ಬಿಡುಗಡೆ

0

ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದ ಜಾತ್ರೋತ್ಸವವು ಜ.16 ರಿಂದ ಜ.21 ರವರೆಗೆ ನಡೆಯಲಿದ್ದು ಜಾತ್ರೋತ್ಸವ ಹಾಗೂ ನೂತನ ಬ್ರಹ್ಮರಥ ಸಮರ್ಪಣೆಯ ಆಮಂತ್ರಣ ಪತ್ರ ಬಿಡುಗಡೆಯು ಡಿ.24 ರಂದು ದೇವಸ್ಥಾನದಲ್ಲಿ ನಡೆಯಿತು.

ದೇವಸ್ಥಾನದ ಪ್ರಧಾನ ಅರ್ಚಕ ಶ್ರೀನಿವಾಸ ಹೆಬ್ಬಾರ್ ಪೂಜಾ ಕಾರ್ಯ ನೆರವೇರಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪದ್ಮನಾಭ ಶೆಟ್ಟಿ ಪೆರುವಾಜೆ ,ಸದಸ್ಯ. ಜಯಪ್ರಕಾಶ್ ರೈ, ಪ್ರೀತಂ ರೈ ಪೆರುವಾಜೆ,ನವೀನ್ ಕುಮಾರ್,ಶಶಿಕುಮಾರ್ ಪೆರುವಾಜೆ,ಲಲಿತಾ,ಸಂಧ್ಯಾ ,ದೇವಸ್ಥಾನದ ಕಚೇರಿ ವ್ಯವಸ್ಥಾಪಕ ವಸಂತ ಆಚಾರ್ಯ ಹಾಗು ಇತರ ಗಣ್ಯರು ಉಪಸ್ಥಿತರಿದ್ದರು.