ಮೂಲೆಮಜಲು ದೋಳ ಗರಡಿಯಲ್ಲಿ ಅಷ್ಟಮಂಗಲ ಪ್ರಶ್ನಾ ಚಿಂತನೆ

0

ಮುಪ್ಪೇರ್ಯ ಗ್ರಾಮದ ಮೂಲೆಮಜಲು ಶ್ರೀ ಬ್ರಹ್ಮ ಬೈದರ್ಕಳ ದೋಳಗರಡಿಯಲ್ಲಿ ಅಷ್ಟಮಂಗಲ ಪ್ರಶ್ನಾ ಚಿಂತನೆ ಡಿ. 21ರಂದು ನಡೆಯಿತು. ದೈವಜ್ಞರಾದ ಕೆ. ಕುಂಞಿಕೃಷ್ಣನ್ ಅರಮಂಗಾನಂ ಹಾಗೂ ಲಕ್ಷ್ಮೀನಾರಾಯಣ ಅಮ್ಮಂಗೋಡು, ಬೋವಿಕಾನ ಕಾರ್ಯಕ್ರಮ ನಡೆಸಿಕೊಟ್ಟರು.

ಗರಡಿಯ ಆಡಳ್ತೆದಾರರು, ಭಕ್ತಾದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಮುಂದಿನ ಪ್ರಶ್ನಾ ಚಿಂತನೆಯು ಜ. 17ರಿಂದ ನಡೆಯಲಿದೆ ಎಂದು ಕೃಷ್ಣಪ್ಪ ಪೂಜಾರಿ ಮೂಲೆಮಜಲು ತಿಳಿಸಿದ್ದಾರೆ.