ಗೌರಿತಾಳಿಗೆ ಕರುನಾಡ ಸೂಪರ್ ಕಿಡ್ – 2023 ಪ್ರಶಸ್ತಿ

0

ಕವಿತಾ ಮೀಡಿಯಾ ಸೋರ್ಸ್ ಪ್ರೈ. ಲಿ. ಹೈಬ್ರೀಡ್ ನ್ಯೂಸ್ ಕನ್ನಡ ಸುದ್ದಿ ವಾಹಿನಿ ವತಿಯಿಂದ ಕೊಡಮಾಡುವ ಕರುನಾಡ ಸೂಪರ್ ಕಿಡ್ 2023 ಪ್ರಶಸ್ತಿಗೆ ಯೋಗ ಪಟು ಗೌರಿತಾ ಕೆ. ಜಿ. ಆಯ್ಕೆಯಾಗಿದ್ದಾಳೆ. ದಿನಾಂಕ ,24.12.2023ರಂದು ವಿಜಯನಗರ ಜಿಲ್ಲೆಯ ಹೊಸಪೇಟೆಯ ವಿಜಯನಗರ ಇಂಡಿಪೆಂಡೆಂಟ್ ಪಿ. ಯು. ಕಾಲೇಜಿನಲ್ಲಿ ನಡೆದ ಕರುನಾಡ ವೈಭವ ಕಾರ್ಯ ಕ್ರಮ ದಲ್ಲಿ ಶ್ರೀ ಪರಮಪೂಜ್ಯ ಡಾ. ಮಹೇಶ್ವರ ಸ್ವಾಮಿಗಳು ಪುಣ್ಯಕ್ಷೇತ್ರ ನಂದಿಪುರ ಪ್ರಶಸ್ತಿ ಪ್ರದಾನ ಮಾಡಿದರು. ಟಿ. ಸುಭಾಷ್, ಪ್ರಾಚಾರ್ಯ ರು ವಿಜಯನಗರ ವಿಶ್ವ ವಿದ್ಯಾಲಯ,ದ್ಯಾಮಣ್ಣ ಕರಿಗಾರ ಪ್ರಥಮ ದರ್ಜೆ ಗುತ್ತಿಗೆದಾರರು,ಕೊಪ್ಪಳ, ಗೀತಾಂಜಲಿ ಪ್ರಾಂಶುಪಾಲರು ನ್ಯಾಷನಲ್ ಪ್ಯಾರಾ ಮೆಡಿಕಲ್ ಕಾಲೇಜು ಕೊಪ್ಪಳ, ಸತೀಶ ಎಸ್. ಎಂ. ಅಧ್ಯಕ್ಷರು ಕರುನಾಡು ಸುಗಮ ಸಂಗೀತ ಮತ್ತು ಸಾಂಸ್ಕೃತಿಕ ಕಲಾ ಸೇವಾ ಸಂಸ್ಥೆ,ಡಾ.ಬಿ.ಎನ್.ಹೊರಪೇಟಿ ಸಂಸ್ಥಾಪಕರು ಹೈಬ್ರೀಡ್ ನ್ಯೂಸ್ ಮೊದಲಾದ ಗಣ್ಯರು ಉಪಸ್ಥಿತರಿದ್ದರು.ಈಕೆ ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದಲ್ಲಿ 3ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಇವಳು ಡಾ. ಗೌತಮ್ ಮತ್ತು ಡಾ. ರಾಜೇಶ್ವರಿ ರವರ ಪುತ್ರಿ .ಇವಳು ಯೋಗಾಭ್ಯಾಸವನ್ನು ಯೋಗ ಗುರು ಶರತ್ ಮರ್ಗಿಲಡ್ಕ ರವರಲ್ಲಿ ಅಮರ ಯೋಗ ಕೇಂದ್ರ ಗುತ್ತಿಗಾರಿನಲ್ಲಿ ಪಡೆಯುತ್ತಿದ್ದಾಳೆ.