ಚೊಕ್ಕಾಡಿಯಲ್ಲಿ ಚರಂಡಿಯಲ್ಲೇ ವಿದ್ಯುತ್ ಕಂಬ ನೆಟ್ಟ ಮೆಸ್ಕಾಂ

0

ಅಮರ ಪಡ್ನೂರು ಗ್ರಾಮದ ಚೊಕ್ಕಾಡಿಯಲ್ಲಿ ಚರಂಡಿಯಲ್ಲೇ ವಿದ್ಯುತ್ ಕಂಬ ನೆಟ್ಟಿರುವ ಘಟನೆ ವರದಿಯಾಗಿದೆ.

ರಸ್ತೆ ಬದಿಯ ಚರಂಡಿಯಲ್ಲಿ ಎರಡು ವಿದ್ಯುತ್ ಕಂಬ ನೆಡಲಾಗಿದ್ದು ಮಳೆಗಾಲ ಚರಂಡಿಯಲ್ಲಿ ಸಾರಾಗವಾಗಿ ನೀರು ಹರಿಯಲು ತೊಂದರೆ ಉಂಟುಮಾಡುವ ಲಕ್ಷಣ ಕಂಡು ಬಂದಿದೆ. ಒಂದೊಮ್ಮೆ ರಸ್ತೆ ಅಗಲೀಕರಣ ವಾದರೂ ಇದನ್ನು ಇಲ್ಲಿಂದ ತೆರವು ಮಾಡುವ ಅನಿರ್ವಾಯತೆ ಬರಬಹುದು.