ಮುಡ್ನೂರು‌ ಮರ್ಕಂಜ ಶಾಲೆಗೆ ನಾಲ್ಕು ಕಂಪ್ಯೂಟರ್ ಕೊಡುಗೆ

0

ಉಜ್ಜೀವನ್ ಬ್ಯಾಂಕ್ ಸಂಸ್ಥೆ ಬೆಂಗಳೂರು ಇದರ ಸಂಸ್ಥಾಪಕ ಪ್ರದೀಪ್ ಜೈನ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೂಡ್ನೂರು ಮರ್ಕಂಜ ಶಾಲೆಗೆ ಭೇಟಿ ನೀಡಿ ಶಾಲೆಗೆ ಉಚಿತವಾಗಿ ನಾಲ್ಕು ಕಂಪ್ಯೂಟರ್ ಕೊಡುಗೆಯಾಗಿ ನೀಡಿದ್ದಾರೆ.

ಅಲ್ಲದೆ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಭೋಜನ ಶಾಲಾ ಕಟ್ಟಡವನ್ನು ವೀಕ್ಷಿಸಿ ಪ್ರಶಂಸಿಸಿದ, ಭೋಜನ ಶಾಲಾ ಕಟ್ಟಡಕ್ಕೆ 10.000 ಸಹಾಯಧನವನ್ನು ಕೊಡುವ ಭರವಸೆ ನೀಡಿದರು.

ಶಾಲಾ ಮುಖ್ಯ ಗುರುಗಳು ದೇವರಾಜ್ ಎಸ್ ಕೆ ಸ್ವಾಗತಿಸಿ ಸ ಶಿಕ್ಷಕ ಬೆಳ್ಳಿಯಪ್ಪ ವಂದಿಸಿದರು. ಶಾಲಾ ಮೇಲುಸ್ತುವಾರಿ ಅಧ್ಯಕ್ಷೆ ಶ್ರೀಮತಿ ಮೀನಾಕ್ಷಿ ಬೊಮ್ಮೇಟ್ಟಿ, ಅಭಿವೃದ್ಧಿ ನಿರ್ವಹಣಾ ಸಮಿತಿ ಸಂಚಾಲಕ ಜಿ ಜಗನ್ನಾಥ್ ಜಯನಗರ ಅಧ್ಯಕ್ಷರಾದ ಹೇಮಕುಮಾರ ಜೋಗಿ ಮೂಲೆ ಉಪಸ್ಥಿತರಿದ್ದರು