ಕೃಷಿ ಇಲಾಖೆ ಇದರ ಆಶ್ರಯದಲ್ಲಿ ರೈತರ ದಿನಾಚರಣೆಯನ್ನು ಸುಳ್ಯದ ಎ.ಪಿ.ಎಂ.ಸಿ. ಸಭಾಂಗಣದಲ್ಲಿ ಆಚರಿಸಲಾಯಿತು.















ಕೃಷಿಕ ಸಮಾಜದ ಅಧ್ಯಕ್ಷ ಅಡ್ಡಂತಡ್ಕ ದೇರಣ್ಣ ಗೌಡರು ಅಧ್ಯಕ್ಷತೆ ವಹಿಸಿದ್ದರು. ರೈತ ಸಂಘದ ಅಧ್ಯಕ್ಷ ಲೋಲಜಾಕ್ಷ ಭೂತಕಲ್ಲು ಉದ್ಘಾಟನೆ ನೆರವೇರಿಸಿದರು. ಕೃಷಿಕ ಸಮಾಜದ ಪ್ರಧಾನ ಕಾರ್ಯದರ್ಶಿ ಚಂದ್ರಾ ಕೋಲ್ಚಾರ್, ಸುಳ್ಯ ತಹಶೀಲ್ದಾರ್ ಮಂಜುನಾಥ್ ಜಿ., ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ರಾಜಣ್ಣ, ಸಹಾಯಕ ಕೃಷಿಕರಾಗಿರುವ ಗುರುಪ್ರಸಾದ್, ಸಹಾಯಕ ತೋಟಗಾರಿಕಾ ಅಧಿಕಾರಿ ಅರಬಣ್ಣ ಪೂಜೇರಿ, ರೈತ ಉತ್ಪಾದಕ ಸಂಸ್ಥೆಯ ಅಧ್ಯಕ್ಷ ವೀರಪ್ಪ ಗೌಡ ಕಣ್ಕಲ್ ಉಪಸ್ಥಿತರಿದ್ದರು.

೨೦೨೨-೨೩ನೇ ಸಾಲಿನಲ್ಲಿ ಭತ್ತದ ಬೆಳೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಿಯಾದ ಜಯಂತ ಮಡಿವಾಳ ಬೆಳ್ಳಾರೆ, ದ್ವೀತಿಯ ಸ್ಥಾನಿಯಾದ ಪ್ರೇಮಾನಂದ ಶೆಟ್ಟಿ ದೇವಚಳ್ಳ, ಬಾಬು ಹೆಗ್ಡೆ ಪೆರುವಾಜೆಯವರನ್ನು ಸನ್ಮಾನಿಸಲಾಯಿತು.
ನಿವೃತ್ತ ಕೃಷಿ ತಾಂತ್ರಿಕ ಅಧಿಕಾರಿ ಮೋಹನ್ ನಂಗಾರು ಸ್ವಾಗತಿಸಿದರು. ತಾಲೂಕು ತಾಂತ್ರಿಕ ವ್ಯವಸ್ಥಾಪಕರಾದ ಕು.ನಂದಿತಾ ವಂದಿಸಿದರು.









