ಸುಳ್ಯ ಮೂಲದ ಯುವಕ ಆಸ್ಟ್ರೇಲಿಯಾ ಬಾಲಕರ ಕ್ರಿಕೆಟ್ ತಂಡಕ್ಕೆ ಆಯ್ಕೆ

0

ಸುಳ್ಯ ತಾಲೂಕು ಕೇನ್ಯ ಗ್ರಾಮದ ಕೇನ್ಯ ರವೀಂದ್ರನಾಥ ಶೆಟ್ಟಿ – ಶ್ರೀಮತಿ ನಿರಂಜಿನಿ ಆರ್. ಶೆಟ್ಟಿಯವರ ಪುತ್ರಿ ಶ್ರೀಮತಿ ರಶ್ಮಿ ಶೆಟ್ಟಿ ಮತ್ತವರ ಪತಿ ರಾಜೇಶ್ ಶೆಟ್ಟಿ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದು, ಅಲ್ಲಿನ 16ರ ಒಳಗಿನ ಬಾಲಕರ ಕ್ರಿಕೆಟ್ ತಂಡಕ್ಕೆ ಅವರ ಪುತ್ರ ರೆಹಾನ್ ಶೆಟ್ಟಿ ಆಯ್ಕೆಯಾಗಿರುವುದಾಗಿ ತಿಳಿದು ಬಂದಿದೆ.

ಮೊನ್ನೆಯಷ್ಟೇ ಕುಟುಂಬವು ಆಸ್ಟ್ರೇಲಿಯಾದಿಂದ ಊರಿಗೆ ಬಂದಿದ್ದು , ಜನವರಿ 6 ರಂದು ರವೀಂದ್ರನಾಥ್ ಶೆಟ್ಟರ ವೈವಾಹಿಕ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರಿದ್ದರು. ರೆಹಾನ್, ಆಸ್ಟ್ರೇಲಿಯಾದ ವಿಕ್ಟೋರಿಯನ್ ಆಫ್ ಮೆಟ್ರೋಪಾಲನ್ ಕ್ರಿಕೆಟ್ ತಂಡಕ್ಕೆ ಆಯ್ಕೆಯಾದ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ರೆಹಾನ್ ಹಾಗೂ ಆತನ ತಂದೆ ರಾಜೇಶ್ ಶೆಟ್ಟಿ ತುರ್ತಾಗಿ ಆಸ್ಟ್ರೇಲಿಯಾಕ್ಕೆ ಧಾವಿಸಿದ್ದಾಗಿ ವರದಿಯಾಗಿದೆ.