ಸುಳ್ಯ‌ ಸಿ.ಎ.‌ಬ್ಯಾಂಕ್ ಚುನಾವಣೆ : ಸಹಕಾರ ಭಾರತಿ ಭರ್ಜರಿ ಗೆಲುವು

0

ಸುಳ್ಯ ಸಿ.ಎ.ಬ್ಯಾಂಕ್ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಸಹಕಾರ ಭಾರತಿ‌ ಕ್ಲೀನ್ ಸ್ವೀಪ್ ಮಾಡಿ, ಮತ್ತೆ ಅಧಿಕಾರದ ಗದ್ದುಗೆ ಏರಿದೆ.

ಸಹಕಾರ ಭಾರತಿಯ ಅಭ್ಯರ್ಥಿ ಗಳಾಗಿ ಸಾಮಾನ್ಯ ಸಾಲಗಾರರ ಕ್ಷೇತ್ರದಿಂದ ಬಿಜೆಪಿ ಹಿರಿಯ ನಾಯಕ ಎನ್.ಎ.ರಾಮಚಂದ್ರ (455), ಶಿವರಾಮ ಕೇರ್ಪಳ (428), ವಿಕ್ರಂ ಅಡ್ಪಂಗಾಯ(445), ಪ್ರಬೋದ್ ಶೆಟ್ಟಿ ಮೇನಾಲ(432), ವಾಸುದೇವ ಪುತ್ತಿಲ(410), ವೆಂಕಟ್ರಮಣ ಮುಳ್ಯ(429), ಎ ಮೀಸಲು ಸ್ಥಾನದಿಂದ ಹೇಮಂತ್ ಕುಮಾರ್ ಕಂದಡ್ಕ(411), ಬಿ ಮೀಸಲು ಸ್ಥಾನದಿಂದ ಸಿ.ಎ.ಬ್ಯಾಂಕ್ ಹಾಲಿ ಅಧ್ಯಕ್ಷ ಬಾಲಗೋಪಾಲ ಸೇರ್ಕಜೆ (505), ಮಹಿಳಾ ಮೀಸಲು ಸ್ಥಾನಕ್ಕೆ ನವ್ಯಾ ಚಂದ್ರಶೇಖರ್ ಅಡ್ಪಂಗಾಯ(497) ಹಾಗೂ ಹರಿಣಾಕ್ಷಿ ಬೇಲ್ಯ (451), ಎಸ್ಟಿ ಮೀಸಲು ಸ್ಥಾನದಿಂದ ಚಂದ್ರಶೇಖರ ದೊಡ್ಡೇರಿ (489), ಪ.ಜಾತಿ ಮೀಸಲು ಸ್ಥಾನದಿಂದ ಕೇಶವ ಹೊಸಗದ್ದೆ(517), ಸಾಲಗಾರರಲ್ಲದ ಕ್ಷೇತ್ರದಿಂದ ನ್ಯಾಯವಾದಿ ಚಂದ್ರಶೇಖರ ನಡುಮನೆ (189) ವಿಜಯಿಯಾಗಿದ್ದಾರೆ.

ಸಹಕಾರ ರಂಗದ ಅಭ್ಯರ್ಥಿಗಳಾಗಿ ಸುಳ್ಯ ಬಿಜೆಪಿ ಮಂಡಲ ಸಮಿತಿ ಮಾಜಿ ಉಪಾಧ್ಯಕ್ಷ, ಬಿಜೆಪಿ ಶಕ್ತಿ ಕೇಂದ್ರದ ಮಾಜಿ ಅಧ್ಯಕ್ಷ ಕರುಣಾಕರ ಅಡ್ಪಂಗಾಯ (214), ಅಜ್ಜಾವರ ಗ್ರಾಮ ಸಮಿತಿ ಬಿಜೆಪಿ ಮಾಜಿ ಅಧ್ಯಕ್ಷ ಶಶಿಧರ ಶಿರಾಜೆ (172), ರಾಮಚಂದ್ರ ಪೆಲ್ತಡ್ಕ (161) ರಾಹುಲ್ ಅಡ್ಪಂಗಾಯ (185), ವಿಶ್ವನಾಥ ಪಿ.ಎಸ್. (131), ರವೀಶ ಎಂ. (122), ಎ ಮೀಸಲು ಸ್ಥಾನದಿಂದ ಸುಳ್ಯ ಮೂರ್ತೆದಾರರ ಸಂಘದ ಅಧ್ಯಕ್ಷ ರಾಮಣ್ಣ ಪೂಜಾರಿ ಪೊಡುಂಬ (213), ಬಿ ಮೀಸಲು ಸ್ಥಾನದಿಂದ ವಿಜಯ ಕುಮಾರ್ ಪಡ್ಪು(123), ಮಹಿಳಾ ಮೀಸಲು ಸ್ಥಾನದಿಂದ ಲೀಲಾ ಮನಮೋಹನ್ (151) ಹಾಗೂ ಜಯಂತಿ ಕೊಯಿಕುಳಿ (158), ಎಸ್ಟಿ ಮೀಸಲು ಸ್ಥಾನದಿಂದ ವಿಶ್ವನಾಥ ನೆಲ್ಲಿಬಂಗಾರಡ್ಕ (123), ಪ.ಜಾತಿ ಮೀಸಲು ಸ್ಥಾನದಿಂದ ಬಾಬು ಮುಗೇರ (119) , ಸಾಲಗಾರರಲ್ಲದ ಕ್ಷೇತ್ರದಿಂದ ಲತೀಶ್ ಕುಮಾರ್ ರಾವ್ (30) ಮತ ಪಡೆದು ಪರಾಭವಗೊಂಡರು.