ಬಿದ್ದು ಸಿಕ್ಕಿದ ಪರ್ಸನ್ನು ವಾರೀಸುದಾರರಿಗೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಶಶಿಧರ ವಾರಣಾಶಿ

0

ಕೋಟೆಮುಂಡುಗಾರು ಸಮೀಪದ ಶಶಿಧರ ವಾರಣಾಶಿಯವರಿಗೆ ರಸ್ತೆಯಲ್ಲಿ ಬಿದ್ದು ಸಿಕ್ಕಿದ ಹಣ, ದಾಖಲೆಗಳಿದ್ದ ಪರ್ಸನ್ನು ವಾರೀಸುದಾರರಿಗೆ ಪ್ರಾಮಾಣಿಕವಾಗಿ ಹಿಂತಿರುಗಿಸಿದ ಘಟನೆ ಡಿ. 31ರಂದು ನಡೆದಿದೆ.


ಶಶಿಧರರು‌ ಸುಳ್ಯದಿಂದ ಬೆಳ್ಳಾರೆ ಮಾರ್ಗವಾಗಿ ದ್ವಿಚಕ್ರ ವಾಹನದಲ್ಲಿ ಬರುತ್ತಿರುವಾಗ ಐವರ್ನಾಡು ಸಮೀಪ ಮುಖ್ಯ ರಸ್ತೆಯಲ್ಲಿ ಚರಣ್ ಜಬಳೆಯವರ ಹಣ ದಾಖಲೆಗಳಿದ್ದ ಪರ್ಸ್ ಬಿದ್ದು ಸಿಕ್ಕಿತು. ಅವರು ಅದರಲ್ಲಿದ್ದ ಆಧಾರ್ ಕಾರ್ಡನ್ನು ತಕ್ಷಣ ಸುದ್ದಿ ವರದಿಗಾರ ಈಶ್ವರ ವಾರಣಾಶಿಯವರಿಗೆ ವಾಟ್ಸಾಫ್ ಮೂಲಕ ಕಳುಹಿಸಿದರು. ಈಶ್ವರ ವಾರಣಾಶಿಯವರು ಪರ್ಸ್ ಕಳೆದುಕೊಂಡ ವ್ಯಕ್ತಿಯನ್ನು ಪತ್ತೆ ಹಚ್ಚಿ ಸಿಕ್ಕಿರುವ ವಿಷಯ ತಿಳಿಸಿದರು. ಬಳಿಕ ಚರಣ್ ರವರು ಶಶಿಧರರನ್ನು ಭೇಟಿ ಮಾಡಿ ಪರ್ಸ್ ಪಡೆದುಕೊಂಡರು.