ಮುರುಳ್ಯ : ಒಡಿಯೂರು ಘಟ ಸಮಿತಿ ಪ್ರಗತಿ ಪರಿಶೀಲನಾ ಸಭೆ

0


ಮುರುಳ್ಯ ಶಾಂತಿನಗರ ಶ್ರೀರಾಮಾಂಜನೇಯ ಭಜನಾ ಮಂದಿರದಲ್ಲಿ ಡಿ.೩೧ರಂದು ಒಡಿಯೂರು ಸಂಘಗಳ ಘಟ ಸಮಿತಿ ಪ್ರಗತಿ ಪರಿಶೀಲನಾ ಸಭೆ ನಡೆಯಿತು.
ಕವಿತಾ ಪೂರ್ಣಚಂದ್ರರವರು ಅಧ್ಯಕ್ಷತೆ ವಹಿಸಿದ್ದರು.
ಬೆಳ್ಳಾರೆ ವಲಯ ಸಂಯೋಜಕರಾದ ಶ್ರೀಮತಿ ಶೀಭಾ ಎಸ್.ರೈಯವರು ಸಮತಿಯ ಸದಸ್ಯರನ್ನುದ್ದೇಶಿ ಮಾತನಾಡಿ ಸಂಸ್ಕಾರ, ಸಂಸ್ಕೃತಿ ಚಟುವಟಿಕೆಗಳು, ನಿಯಾಮಾವಾಳಿಗಳ ಮಾಹಿತಿ ನೀಡಿದರು.


ಮುರುಳ್ಯ ಸೆವಾ ದೀಕ್ಷಿತೆ ಶ್ರೀಮತಿ ಅಮಿತಾ ಆರ್.ರೈ ಸಭೆ ನಡವಳಿ ನಡೆಸಿದರು.
ಮಂದಿರದ ಅಧ್ಯಕ್ಷ ವಸಂತ ನಡುಬೈಲುರವರು ಅಯೋಧ್ಯೆ ಬ್ರಹ್ಮಕಲಶೋತ್ಸವದ ಮಾಹಿತಿ ನೀಡಿದರು. ಜವಾಬ್ದಾರಿ ತಂಡದ ಭಾಗ್ಯೋದಯದ
ಜಯಲಕ್ಷ್ಮಿ ವರದಿ ವಾಚಿಸಿದರು. ಶ್ರೀಮತಿ ಲತಾ ಸ್ವಾಗತಿಸಿ, ವಂದಿಸಿದರು. ಪಂಚಾಯತ್ ಸದಸ್ಯೆ ಶೀಲಾವತಿ ಗೋಳ್ತಿಲ ವೇದಿಕೆಯಲ್ಲಿದ್ದರು.
ವರದಿ: ಎ.ಎಸ್.ಎಸ್