ಜ.12-14: ಚೊಕ್ಕಾಡಿ ಪ್ರೌಢಶಾಲೆಯ ಸುವರ್ಣ ಮಹೋತ್ಸವ ಸಂಭ್ರಮ

0

ಚೊಕ್ಕಾಡಿ ಎಜ್ಯುಕೇಶನ್ ಸೊಸೈಟಿಕುಕ್ಕುಜಡ್ಕ, ಚೊಕ್ಕಾಡಿ ವಿದ್ಯಾ ಸಂಸ್ಥೆಗಳು ಇದರ ಆಶ್ರಯದಲ್ಲಿ ಚೊಕ್ಕಾಡಿ ಪ್ರೌಢಶಾಲೆಯ ಸುವರ್ಣ ಮಹೋತ್ಸವ ಕಾರ್ಯಕ್ರಮವು ಜ. 12, 13 ಮತ್ತು 14 ರಂದುನಡೆಯಲಿದ್ದು ಪೂರ್ವಭಾವಿಯಾಗಿ ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಮಾಜಿ ಸಚಿವ ಆಡಳಿತ ಮಂಡಳಿ ಅಧ್ಯಕ್ಷ ಎಸ್.ಅಂಗಾರ ರವರು ಪತ್ರಿಕಾಗೋಷ್ಠಿ ನಡೆಸಿದರು.

1973 ರಲ್ಲಿ ಹಿರಿಯರು ಹುಟ್ಟು ಹಾಕಿದ ಶಾಲೆಗೆ 50 ವರ್ಷ ಪೂರೈಸಿದ್ದು ಸುವರ್ಣ ಮಹೋತ್ಸವದ ಹೊಸ್ತಿಲ್ಲಿದೆ. ಶಾಲೆಯ ಉಳಿವಿಗಾಗಿ ಹಾಗೂ ಬೆಳವಣಿಗಾಗಿ ಈ ಸಂದರ್ಭದಲ್ಲಿ ಶಾಲೆಯಲ್ಲಿ ಆಧುನಿಕ ಯುಗದ ಅವಶ್ಯಕತೆಗನುಗುಣವಾಗಿ ಹೊಸ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಕಟ್ಟಡದ ನವೀಕರಣ ಹಾಗೂ ತರಗತಿ ಕೊಠಡಿಗಳ ದಿಕ್ಕು ಬದಲಾವಣೆಯ ಕಾರ್ಯವನ್ನು ಮಾಡಲಾಗಿದೆ. ಶಾಲಾ ಕಟ್ಟಡದ ಪ್ರವೇಶ ದ್ವಾರದ ದಕ್ಷಿಣ ಭಾಗದಲ್ಲಿ ತರಗತಿ ಕೊಠಡಿಗಳಿಗೆ ಪ್ರವೇಶದ ಬಾಗಿಲುಗಳನ್ನು ತೆರವುಗೊಳಿಸ ಪ್ರವೇಶ ಬಾಗಿಲುಗಳನ್ನು ಉತ್ತರ ದಿಕ್ಕಿನಿಂದ ತೆರೆಯಲಾಗಿದೆ. ವಿದ್ಯಾರ್ಥಿಗಳಿಗೆ ಮೌಲ್ಯಯುತ ಶಿಕ್ಷಣ ನೀಡುವ ಉದ್ದೇಶಕ್ಕಾಗಿ ಕಂಪ್ಯೂಟರ್ ತರಗತಿಗಳು, ಪ್ರಯೋಗಾಲಯ,ವಾಚನಾಲಯ, ವಿಶಾಲವಾದ ಮೈದಾನದ ನಿರ್ಮಾಣ ಮಾಡಲಾಗಿದೆ. ಪ್ರಾಥಮಿಕ ಇಂಗ್ಲೀಷ್ ಮೀಡಿಯಂ ತರಗತಿಗಳು ನಡೆಸಲಾಗುತ್ತಿದೆ. ನೂತನ ಕಟ್ಟಡದ ನಿರ್ಮಾಣಕ್ಕೆ ಬೇಕಾದ ಸಾಮಾಗ್ರಿಗಳ ವ್ಯವಸ್ಥೆ ಮಾಡಲಾಗಿದೆ. ಅಭಿವೃದ್ಧಿ ಕಾರ್ಯಗಳ ಜತೆಗೆ 3 ದಿನಗಳ ಕಾಲ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಅಳವಡಿಸಿಕೊಳ್ಳಲಾಗಿದೆ ಎಂದು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

ಜ. 12 ರಂದು ಬೆಳಗ್ಗೆ ಗಂಟೆ 9.30 ಕ್ಕೆ ಅಮರ ಮುಡ್ನೂರು ಪಂಚಾಯತ್ ಅಧ್ಯಕ್ಷೆ ಜಾನಕಿ ಕಂದಡ್ಕ ಧ್ವಜಾರೋಹಣ ನೆರವೇರಿಸುವ ಮೂಲಕ ಚಾಲನೆ ಕಾರ್ಯಕ್ರಮಕ್ಕೆ ನೀಡಲಿರುವರು. ಸಂಜೆ ಗಂಟೆ 5 ರಿಂದ ಉದ್ಘಾಟನಾ ಸಮಾರಂಭ ದ.ಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಉದ್ಘಾಟಿಸಲಿರುವರು. ಮಾಜಿ ಸಚಿವ ಎಸ್ ಅಂಗಾರ ಅಧ್ಯಕ್ಷತೆ ವಹಿಸಲಿರುವರು. ಖ್ಯಾತ ಕವಿ ಸುಬ್ರಾಯ ಚೊಕ್ಕಾಡಿ ಆಶಯ ಭಾಷಣ ಮಾಡಲಿದ್ದಾರೆ . ಶಾಸಕರಾದ ಕೋಟ ಶ್ರೀನಿವಾಸ ಪೂಜಾರಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ.


ಶಾಸಕಪಿ.ಎಂ .ಫಾರೂಕ್, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಶಿಕ್ಷಣ ಇಲಾಖೆಯ ಉಪನಿರ್ದೇಶಕ ದಯಾನಂದ ರಾಮಚಂದ್ರ ನಾಯಕ್ ಸೇರಿದಂತೆ ಹಲವಾರು ಗಣ್ಯ ಅತಿಥಿಗಳು ಭಾಗವಹಿಸಲಿದ್ದಾರೆ. ಶಾಲಾವಿದ್ಯಾರ್ಥಿಗಳಿಂದ ,ಹಳೆ ವಿದ್ಯಾರ್ಥಿಗಳಿಂದ ಸ್ಥಳೀಯ ಸಂಘ ಸಂಸ್ಥೆಗಳ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಕಲಾವಿದೆ ಸಾಯಿ ಶ್ರುತಿ ಪಿಲಿಕಜೆ ಯವರಿಂದ ವಿನೂತನ ಮಾತನಾಡುವ ಬೊಂಬೆ ಚಿಂಟು, ರಾತ್ರಿ ಗಂಟೆ 10 ರಿಂದ ಮಂಜೇಶ್ವರ ಐಸಿರಿ ಕಲಾವಿದರಿಂದ ಕಲ್ಜಿಗದ ಮಾಯ್ಕರೆ ಪಂಜುರ್ಲಿ ತುಳು ನಾಟಕ ಪ್ರದರ್ಶನವಾಗಲಿರುವುದು. ಜ. 13 ರಂದು ಅಪರಾಹ್ನ ಗಂಟೆ
2 .15 ರಿಂದ ಶೈಕ್ಷಣಿಕ ವಿಚಾರಗೋಷ್ಠಿ, ಶೈಕ್ಷಣಿಕ ಸವಾಲುಗಳು,ಸಂಜೆ ಗಂಟೆ 5:30 ರಿಂದ ಸಭಾ ಕಾರ್ಯಕ್ರಮ ಮಾಜಿ ಸಚಿವರು, ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಎಸ್.ಅಂಗಾರ ಅಧ್ಯಕ್ಷತೆ ವಹಿಸಲಿರುವರು. ಅತಿಥಿಗಳಾಗಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಪ್ರತಾಪ್ ಸಿಂಹ ನಾಯಕ್, ಮಂಜುನಾಥ ಭಂಡಾರಿ, ಜಿಲ್ಲಾ ಪಂಚಾಯತ್
ಸಿ .ಇ. ಓ ಡಾ. ಆನಂದ್, ತಹಶೀಲ್ದಾರ್ ಮಂಜುನಾಥ್ ಸೇರಿದಂತೆ ಗಣ್ಯ ಅತಿಥಿಗಳು ಭಾಗವಹಿಸಲಿರುವರು.

ಸಂಜೆ ಗಂಟೆ 3:30 ರಿಂದ ಸಾಂಸ್ಕೃತಿಕ ಕಾರ್ಯಕ್ರಮ ನೃತ್ಯ ವೈಭವ ನಾಟಕ ನೃತ್ಯ ಪ್ರದರ್ಶನ ಮಹಿಳಾ ನೃತ್ಯ ಶ್ಲೋಕಾರ್ಪಣಂ, ಜಾನಪದ ನೃತ್ಯ ಪ್ರದರ್ಶನ, ಕಿರು ಪ್ರಹಸನ ಮತ್ತು ಜಾನಪದ ನೃತ್ಯ, ರಾತ್ರಿ ಗಂಟೆ 10 ರಿಂದ ಹಟ್ಟಿಯಂಗಡಿ ಮೇಳದವರಿಂದ ಚಂದ್ರಾವಳಿ ವಿಲಾಸ -ರಾಜಾ ರುದ್ರಕೋಪ ಯಕ್ಷಗಾನಪ್ರದರ್ಶನವಾಗಲಿರುವುದು.
ಜ. 14 ಬೆಳಗ್ಗೆ ಗಂಟೆ 9.30 ರಿಂದ ಆವರ್ತನ, ಹಿರಿಯ ವಿದ್ಯಾರ್ಥಿಗಳಪುನರ್ಮಿಲನ ಕಾರ್ಯಕ್ರಮ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಉದ್ಘಾಟಿಸಲಿದ್ದಾರೆ. ಮಧ್ಯಾಹ್ನ 12 ರಿಂದ ಸಂಗೀತ ಸಾಂಗತ್ಯ ಕೆ.ಆರ್ ಗೋಪಾಲಕೃಷ್ಣ ಮತ್ತು ಬಳಗ ಸುಳ್ಯ ಇವರಿಂದ ನಡೆಯಲಿರುವುದು. ಸಂಜೆ ಗಂಟೆ 5 ರಿಂದ ಸಮಾರೋಪ ಸಮಾರಂಭ ಸುಳ್ಯ ವಿಧಾನಸಭಾ ಕ್ಷೇತ್ರ ಶಾಸಕಿ ಕು. ಭಾಗೀರಥಿ ಮುರುಳ್ಯ ಅಧ್ಯಕ್ಷತೆವಹಿಸಲಿರುವರು.

ಶಾಸಕ ಹರೀಶ್ ಕುಮಾರ್ ಕೆ, ಎಸ್. ಎಲ್ ಭೋಜೇಗೌಡ ಹಾಗೂ ಗಣ್ಯ ಅತಿಥಿಗಳು ಭಾಗವಹಿಸಲಿದ್ದಾರೆ.
ನಿವೃತ್ತ ಶಿಕ್ಷಕರಿಗೆಮತ್ತು ಗೌರವ ಶಿಕ್ಷಕರಿಗೆ ಗುರುವಂದನ ಕಾರ್ಯಕ್ರಮ, ಕ್ರೀಡಾಪಟುಗಳಿಗೆ ಅಭಿನಂದನಾ ಕಾರ್ಯಕ್ರಮ ಮತ್ತು ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಸಂಜೆ ಗಂಟೆ 3:30 ರಿಂದ ಸಾಂಸ್ಕೃತಿಕ ಕಾರ್ಯಕ್ರಮ ಚಿಲಿಪಿಲಿ ಕಲರವ, ನೃತ್ಯ ಪ್ರದರ್ಶನ, ಕಿರುನಾಟಕ, ಯಕ್ಷಗಾನ ಬಯಲಾಟ ಹಾಗೂ ಕುದ್ರೋಳಿ ಗಣೇಶ್ ಇವರಿಂದ ವಿಸ್ಮಯ ಜಾದೂ ಪ್ರದರ್ಶನ ನಡೆಯಲಿರುವುದು ಎಂದು ಶಾಲಾ ಸಮಿತಿ ಸಂಚಾಲಕ ರಾಧಾಕೃಷ್ಣ ಬೊಳ್ಳೂರು ವಿವರ ನೀಡಿದರು.
ಶಾಲೆಯ ಮುಖ್ಯ ಶಿಕ್ಷಕ ಸಂಕೀರ್ಣ ಎ.ಎಲ್ ಚೊಕ್ಕಾಡಿ ಉಪಸ್ಥಿತರಿದ್ದರು.