ಪಂಜ: ಜಾತ್ರೋತ್ಸವ ಪೂರ್ವಭಾವಿ- ಕೂತ್ಕುಂಜ ಗ್ರಾಮ ಸಮಿತಿ ಸದಸ್ಯರ ಸಭೆ

0

ಪಂಜ ಸೀಮೆಯ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವದ ಪೂರ್ವಭಾವಿ
ಕೂತ್ಕುಂಜ ಗ್ರಾಮದ ಸಂಚಾಲಕರು ಹಾಗೂ ಬೈಲುವಾರು ಸಮಿತಿ ಸದಸ್ಯರ ಸಭೆಯು ಜ.7. ರಂದು ದೇವಳದ ಪಾರ್ವತಿ ಸಭಾಭವನದಲ್ಲಿ ಜರುಗಿತು.

ಉತ್ಸವ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್ ಸಭಾಧ್ಯಕ್ಷತೆ ವಹಿಸಿದ್ದರು.ಕೂತ್ಕುಂಜ ಗ್ರಾಮ ಸಮಿತಿ ಸಂಚಾಲಕರಾದ ಪರಮೇಶ್ವರ ಗೌಡ ಬಿಳಿಮಲೆ, ಕೇಶವ ಕುದ್ವ, ಆನಂದ ಜಳಕದಹೊಳೆ,ಉತ್ಸವ ಸಮಿತಿ ಸದಸ್ಯ ಬಾಲಕೃಷ್ಣ ಗೌಡ ಕುದ್ವ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭೆಯಲ್ಲಿ ಗ್ರಾಮ ಸಮಿತಿಯ ಸದಸ್ಯರು ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ಕೇಶವ ಕುದ್ವ ಸ್ವಾಗತಿಸಿದರು.ಪರಮೇಶ್ವರ ಗೌಡ ಬಿಳಿಮಲೆ ಪ್ರಾಸ್ತಾವಿಕ ಮಾತನಾಡಿದರು.
ಡಾ.ದೇವಿಪ್ರಸಾದ್ ಕಾನತ್ತೂರ್ ವಂದಿಸಿದರು.
ಜ.24 ರಂದು ಗೊನೆ ಕಡಿಯುವುದು. ಫೆ.1 ರಂದು ರಾತ್ರಿ ಧ್ವಜಾರೋಹಣ ಫೆ.5 ರಂದು ಹಗಲು ದರ್ಶನ ಬಲಿ,ಫೆ.6. ರಂದು ರಾತ್ರಿ ಬ್ರಹ್ಮರಥೋತ್ಸವ ನಡೆಯಲಿದೆ.