ಸುಬ್ರಹ್ಮಣ್ಯ ಐನೆಕಿದು ಪ್ರಾ.ಕೃ.ಪ.ಸಂಘದಿಂದ ಕೃಷಿ ಪೂರಕ ಮಾಹಿತಿಯುಕ್ತ ಕ್ಯಾಲೆಂಡರ್ ಬಿಡುಗಡೆ

0

ಸುಬ್ರಹ್ಮಣ್ಯ ಐನೆಕಿದು ಪ್ರಾ.ಕೃ.ಸ.ಸಂಘದ ಈ ವರ್ಷ ಕೃಷಿ ಪೂರಕ ಮಾಹಿತಿಯುಕ್ತ ಕ್ಯಾಲೆಂಡರ್ ಬಿಡುಗಡೆ ಮಾಡಿದೆ.

ಈ ಒಂದು ಕ್ಯಾಲೆಂಡರ್ ನಲ್ಲಿ ಪ್ರತಿ ತಿಂಗಳಲ್ಲಿ ಕೃಷಿ ಕೆಲಸಕ್ಕಾಗಿ ಇರುವ ವಿಶೇಷ ದಿನಾಂಕಗಳನ್ನು ಪ್ರತ್ಯೇಕವಾಗಿ ಮುದ್ರಿಸಲಾಗಿದೆ, ಬಂಗಾರ ಖರೀದಿಗೆ ಇರುವ ವಿಶೇಷ ದಿನವನ್ನು ಬರೆಯಲಾಗಿದೆ, ಸಾಲ ತೀರಿಸುವ ವಿಶೇಷ ದಿನವನ್ನು ತೋರಿಸಲಾಗಿದೆ. ಸರ್ವ ಕಷ್ಟ ಪರಿಹಾರ ಮಂತ್ರ ಸಾಲ ತಿರುವಳಿ ಮಂತ್ರ ಬರಬೇಕಾದ ಹಣಕ್ಕಾಗಿ ಮಾಡುವ ಮಂತ್ರ, ಮಕ್ಕಳಿಗೆ ಅಭಿವೃದ್ಧಿಗಾಗಿ ತಂದೆ ತಾಯಿಗಳು ಮಾಡುವ ಮಂತ್ರ, ಅಗ್ನಿಹೋತ್ರದ ಮಂತ್ರಗಳು, ಹೋಮದ ಭಸ್ಮದ ಉಪಯೋಗದ ಮಾಹಿತಿ, ಹೆಚ್ಚಿನ ಇಳುವರಿಗಾಗಿ ಕೃಷಿ ಮಂತ್ರ, ಕೃಷಿಯಲ್ಲಿನ ಎಲ್ಲಾ ರೀತಿಯ ಹುಳಗಳ ಮತ್ತು ರೋಗಗಳ ನಿವಾರಣೆಗಾಗಿ ಮಾಡಬೇಕಾದ ಬೇವಿನ ಗಿಡದ ಪೂಜೆಯ ಮಾಹಿತಿ ಮುದ್ರಿಸಲಾಗಿದೆ. ಸಾವಯವ ಕೃಷಿ ಮಾಡಲು ಉಪಯುಕ್ತವಾದ ಕೃಷಿಕರು ತಾವೇ ತಯಾರಿಸಿಕೊಳ್ಳುವ ಗೊಬ್ಬರಗಳಾದ ಜೀವಾಮೃತ, ವೇಸ್ಟ್ ಡಿ ಕಂಪೋಸರ್, ಗೋಕ್ವಪಾಮೃತ, ಪಂಚಗವ್ಯ, ದಶಗವ್ಯ, ಪೋಷಕಾಂಶಗಳ ದ್ರವ್ಯ, ಪ್ರಾಣಿಗಳ ಗೊಬ್ಬರ, ಹೀಗೆ ಹತ್ತು ಹಲವು ಸಿದ್ದೌಷದವಾದ ದಶಪರ್ಣಿ ಇತ್ಯಾದಿ ಗೊಬ್ಬರಗಳ ತಯಾರಿಸುವ ಮಾಹಿತಿಯನ್ನು ನೀಡಲಾಗಿದೆ. ಕೃಷಿಕರ ಆರೋಗ್ಯಕ್ಕಾಗಿ ತಾವೇ ದಿನಂಪ್ರತಿ ತಯಾರಿಸಿ ಕೊಂಡು ಕುಡಿಯಬೇಕಾದ ಆಹಾರದಿಂದ ಆರೋಗ್ಯ ದಿವ್ಯ ಔಷಧಿ ಬಗ್ಗೆ ಮಾಹಿತಿಯಿದೆ. ತೋಟಕ್ಕೆ ಬರ ನಿರ್ವಹಣೆ, ಕಳೆ ನಾಶಕ ತಯಾರಿಸುವ ವಿಧಾನದಂತೆ ಮುಳ್ಳನ್ನು ಮುಳ್ಳಿನಿಂದ ತೆಗೆ ಎಂಬ ನಾಣ್ಣುಡಿಯಂತೆ ಕಳೆಗಳನ್ನು ನಿಯಂತ್ರಿಸುವ ವಿಧಾನಗಳನ್ನು ಬರೆಯಲಾಗಿದೆ. ನಿರಂತರ ತರಕಾರಿ, ಪ್ರತಿ ತಿಂಗಳು ಯಾವ ಯಾವ ಸಮಯದಲ್ಲಿ ಯಾವ ತರಕಾರಿ ಕೃಷಿ ಮಾಡಬೇಕು ಎಂಬ ಮಾಹಿತಿಗಳನ್ನು ಮುದ್ರಿಸಲಾಗಿದ್ದು ಕೃಷಿಕರಿಗಂತು ಇದು ಉಪಯೋಗ ಬೀಳುವುದರಲ್ಲಿ ಸಂಶಯವಿಲ್ಲ.