ಸುಳ್ಯ ರಾಮ ಮಂದಿರದ ಬ್ರಹ್ಮಕಲಶೋತ್ಸವದ ಪೂರ್ವ ತಯಾರಿಯ ಸಭೆ- ಉಪ ಸಮಿತಿಗಳ ರಚನೆ

0

ಸುಳ್ಯದ ಶ್ರೀ ರಾಮ ಪೇಟೆಯಲ್ಲಿ ಇರುವ ಶ್ರೀ ರಾಮ ಭಜನಾ ಮಂದಿರದ ಬ್ರಹ್ಮಕಲಶೋತ್ಸವವು ಫೆ.25 ರಿಂದ 28 ರ ತನಕ ನಡೆಯಲಿದೆ. ಕಾರ್ಯಕ್ರಮದ ವಿಸ್ತೃತ ಉಪ ಸಮಿತಿಗಳ ರಚನೆ ಹಾಗೂ ಕಾರ್ಯಕ್ರಮದ ರೂಪು ರೇಷೆಗಳ ಕುರಿತು ಸಮಾಲೋಚನಾ ಸಭೆಯು ಜ.7 ರಂದು ಭಜನಾ ಮಂದಿರದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಹಿರಿಯರು ಕೃಷ್ಣ ಕಾಮತ್ ಅರಂಬೂರು ವಹಿಸಿದ್ದರು.
ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ಮಾತಿನೊಂದಿಗೆ ವಿಸ್ತೃತ ಉಪ ಸಮಿತಿಯ ವಿವರವನ್ನು ಸಮಿತಿಯ ಪ್ರಧಾನ ಕಾರ್ಯದರ್ಶಿ ನಾರಾಯಣ ಕೇಕಡ್ಕ ರವರು ತಿಳಿಸಿದರು.


ವೇದಿಕೆಯಲ್ಲಿ ಪದ್ಮಶ್ರೀ ಪುರಸ್ಕೃತ ಡಾ.ಗಿರೀಶ್ ಭಾರದ್ವಾಜ್, ಧರ್ಮ ದರ್ಶಿ ಮಂಡಳಿಯ ಸದಸ್ಯ ರಾದ ಅಶೋಕ ಪ್ರಭು ಸುಳ್ಯ, ಕಾರ್ಯದರ್ಶಿ ಶ್ರೀನಿವಾಸ ರಾವ್ ಸುಳ್ಯ, ಮಹಾಬಲ ಕೇರ್ಪಳ, ಗೋಪಾಲ ಎಸ್.ನಡುಬೈಲು, ಸಂದೇಶ್ ಕುರುಂಜಿ, ಪುರುಷೋತ್ತಮ ಎಂ.ಎಸ್, ಭಾಸ್ಕರ ನಾಯರ್ ಅರಂಬೂರು ಉಪಸ್ಥಿತರಿದ್ದರು.

ಭಾಸ್ಕರ ನಾಯರ್ ಪ್ರಾರ್ಥಿಸಿದರು. ಅಶೋಕ ಪ್ರಭು ಸ್ವಾಗತಿಸಿದರು. ಗೋಪಾಲ ಎಸ್.ನಡುಬೈಲು ವಂದಿಸಿದರು. ಸಮಿತಿಯ ಜತೆ ಕಾರ್ಯದರ್ಶಿ ಶಿವಪ್ರಸಾದ್ ಆಲೆಟ್ಟಿ ಮತ್ತು ವಾಸುದೇವ ನಾಯಕ್ ಕೇರ್ಪಳ ಕಾರ್ಯಕ್ರಮ ನಿರೂಪಿಸಿದರು.


ಸಭೆಯಲ್ಲಿ ವಿವಿಧ ಕ್ಷೇತ್ರದ ಗಣ್ಯರು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಮತ್ತು ಸದಸ್ಯರು, ಸ್ಥಳೀಯ ಸುಳ್ಯ ನಗರದ ಪ್ರತಿ ವಾರ್ಡಿನ ಭಕ್ತರು ಭಾಗವಹಿಸಿದರು.