ಅರಂಬೂರು ಮೂಕಾಂಬಿಕಾ ಭಜನಾ ಮಂದಿರದ ಸುವರ್ಣ ಮಹೋತ್ಸವದ ಸಿದ್ಧತಾ ಸಭೆ- ದೇಣಿಗೆ ಸಂಗ್ರಹಕ್ಕೆ ಚಾಲನೆ

0

ಅರಂಬೂರು
ಶ್ರೀ ಮೂಕಾಂಬಿಕಾ ಭಜನಾ ಮಂದಿರದ ಸುವರ್ಣ ಮಹೋತ್ಸವ ಫೆ. 13, 14, 15 ರಂದು ನಡೆಯಲಿದ್ದು ಪೂರ್ವ ಸಿದ್ಧತಾ ಸಭೆಯು ಮಂದಿರದ ಸಭಾಂಗಣದಲ್ಲಿ
ಜ.7 ರಂದು ನಡೆಯಿತು.

ಶ್ರೀ ಮೂಕಾಂಬಿಕಾ ದೇವಿಯ ಬಿಂಬಕ್ಕೆ ಬೆಳ್ಳಿಯ ಬಾಬ್ತು ಹಾಗೂ ಮಹೋತ್ಸವದ ಬಾಬ್ತು ದೇಣಿಗೆ ಸಂಗ್ರಹಕ್ಕೆ ಪದ್ಮಶ್ರೀ ಪುರಸ್ಕೃತ ಗಿರೀಶ್ ಭಾರದ್ವಾಜ್ ಹಾಗೂ ಸಮಿತಿ ಅಧ್ಯಕ್ಷ ಶ್ರೀಪತಿ ಭಟ್ ಮಜಿಗುಂಡಿ ಯವರು ಚೆಕ್ ಹಸ್ತಾಂತರಿಸುವ ಮೂಲಕ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಸುವರ್ಣ ಮಹೋತ್ಸವ ಸಮಿತಿ ಕಾರ್ಯಾಧ್ಯಕ್ಷ ಕೃಷ್ಣಪ್ಪ ಕೆ. ಎಸ್ ಕೆದಂಬಾಡಿ,
ಭಜನಾ ಮಂದಿರದ ಅಧ್ಯಕ್ಷ ರತ್ನಾಕರ ರೈ ಅರಂಬೂರು,
ಕಾರ್ಯದರ್ಶಿ ಬಂಗಾರುಭಾರದ್ವಾಜ್, ದಿವಾಕರ ನಾಯಕ್,
ಪಂ.ಸದಸ್ಯ ಸುಧೇಶ್ ಅರಂಬೂರು, ರತೀಶನ್ ಅರಂಬೂರು,
ವೇದಾವತಿ‌ ನೆಡ್ಚಿಲು, ಎ.ಸಿ. ವಸಂತ ,ಕೋಶಾಧಿಕಾರಿ ನಾರಾಯಣ ನಾಯ್ಕ ಅರಂಬೂರು, ಸ್ಮರಣ ಸಂಚಿಕೆಯ ಸಂಪಾದಕ ಕುಮಾರಸ್ವಾಮಿ ತೆಕ್ಕುಂಜ,
ಅರಂಬೂರು ಒಕ್ಕೂಟದ ಅಧ್ಯಕ್ಷ ಚಂದ್ರಶೇಖರ ನೆಡ್ಚಿಲು,ಗುರುಸ್ವಾಮಿ ಈಶ್ವರ ಕುಲಾಲ್ ಮಜಿಗುಂಡಿ, ಜನಾರ್ದನ ಚೊಕ್ಕಾಡಿ ಸಿರಿಕುರಲ್, ಪುಷ್ಪರಾಜ್ ಕುಲಾಲ್ ಮಜಿಗುಂಡಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಪ್ರೀತಿಕ್ ಕುಲಾಲ್ ಮಜಿಗುಂಡಿ ಕಾರ್ಯಕ್ರಮ ನಿರೂಪಿಸಿದರು. ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರುಭಾಗವಹಿಸಿದರು.ಈ ಸಂದರ್ಭದಲ್ಲಿ
ವಿಸ್ತೃತ ಉಪ ಸಮಿತಿ ರಚಿಸಿ,ಸಮಿತಿಯ ಸಂಚಾಲಕರಿಗೆ ಮತ್ತು ಸದಸ್ಯರಿಗೆ ಜವಬ್ದಾರಿ ಹಂಚಿಕೆ ಮಾಡಲಾಯಿತು.