ಮರ್ಕಂಜ : ರಬ್ಬರ್ ಗೋಡೌನ್ ಗೆ ಬೆಂಕಿ – ಹಾನಿ

0

ಮರ್ಕಂಜ ಗ್ರಾಮದ ಮಂಜಿಕ್ಕಾನ ಎಂಬಲ್ಲಿ ರಬ್ಬರ್ ಗೋಡೌನ್ ಗೆ ಬೆಂಕಿ ತಗುಲಿ‌ ರಬ್ಬರ್ ಶೀಟ್ ಬೆಂಕಿಗಾಹುತಿಯಾದ ಘಟನೆ ಜ.7ರಂದು ಸಂಜೆ ವರದಿಯಾಗಿದೆ.

ಮರ್ಕಂಜದ ಮಂಜಿಕ್ಕಾನ ಬೆಳ್ಯಪ್ಪ ಗೌಡ ಎಂಬವರು ಸಂಜೆ ರಬ್ಬರ್ ಗೂಡಿಗೆ ಬೆಂಕಿ ಹಾಕಿ ರಬ್ಬರ್ ಶೀಟ್ ಹಾಕುತ್ತಿದ್ದರೆನ್ನಲಾಗಿದೆ. ಈ ಸಂದರ್ಭ ಆಕಸ್ಮಾತ್ತಾಗಿ ಬೆಂಕಿ ರಬ್ಬರ್ ಗೂಡು ಗೆ ಬೆಂಕಿ ವ್ಯಾಪಿಸಿ, ರಬ್ಬರ್ ಶೀಟ್ ಹೊತ್ತಿ ಉರಿದಿದೆ.

ಸುಮಾರು 160ರಷ್ಟು ರಬ್ಬರ್ ಶೀಟ್ ಮತ್ತು 25 ಕೆಜಿ ರಬ್ಬರ್ ಕ್ಯ್ರಾಪ್ ಹಾನಿಗೊಂಡಿದೆ ಎಂದು ತಿಳಿದು ಬಂದಿದೆ. ಬೆಂಕಿಯ ರಭಸಕ್ಕೆ 4 ಸಿಮೆಂಟ್ ಶೀಟ್ ಹುಡಿಯಾಗಿದ್ದು, ರಬ್ಬರ್ ಗೋಡೌನ್‌ಗೆ ಹಾನಿಯಾಗಿದೆ. ಬೆಂಕಿ ಹತ್ತಿ ಉರಿಯುತ್ತಿರುವುದು ತಿಳಿದ ತಕ್ಷಣ ವಿಶ್ವನಾಥ ಜೋಗಿಮೂಲೆ, ಮೋಹನ ಹೊಸೋಳಿಕೆ, ವಿಶ್ವನಾಥ ಪೂಜಾರಿ ಬಳ್ಳಕ್ಕಾನ, ಕೊರಗಪ್ಪಗೌಡ ಕಕ್ಕಾಡು, ಹೇಮಕುಮಾರ ಜೋಗಿಮೂಲೆ, ಚಂದ್ರಶೇಖರ ಹೋಸೋಳಿಕೆ, ರುಕ್ಮಯ ಗೌಡ ಜೋಗಿಮೂಲೆ, ನಯನ್ ಮತ್ತು ಗ್ರಾಮ ಪಂಚಾಯತ್ ಅಧ್ಯಕ್ಷೆ ಗೀತಾ ಹೊಸೋಳಿಕೆ ಬೆಂಕಿ ನಂದಿಸಲು ಸಹಕರಿಸಿದರು.