ಅಂತಾರಾಷ್ಟ್ರೀಯ ಮಟ್ಟದ ಯೋಗಾಸನ ಸ್ಪರ್ಧೆಗೆ ತನ್ವಿ ಚಿಕ್ಮುಳಿ ಆಯ್ಕೆ

0

ಪತಂಜಲಿ ಯೋಗ ಕೇಂದ್ರ ಬೆಂಗಳೂರು, ಡಿ.ವಿ.ಜಿ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ವೇದಿಕೆ ಬೆಂಗಳೂರು ಇವರು ಶ್ರೀ ಹೊನ್ನಗಂಗಾ ಕಲ್ಯಾಣ ಭವನ ಲಗ್ಗೆರೆ, ಬೆಂಗಳೂರಿನಲ್ಲಿ ಆಯೋಜಿಸಿದ ಮುಕ್ತ ರಾಷ್ಟ್ರ ಮಟ್ಟದ ಯೋಗಾಸನ ಚಾಂಪಿಯನ್ ಶಿಪ್ -2024 ಸ್ಪರ್ಧೆಯಲ್ಲಿ 15 – 20 ವರ್ಷದ ಬಾಲಕಿಯರ ವಿಭಾಗದಲ್ಲಿ
ತನ್ವಿ ಚಿಕ್ಮುಳಿ ಚತುರ್ಥ ಸ್ಥಾನಗಳಿಸಿ ಏಪ್ರಿಲ್ ನಲ್ಲಿ ಮಲೇಷ್ಯಾದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಮಟ್ಟದ ಯೋಗಾಸನ ಸ್ಪರ್ಧೆಗೆ ಆಯ್ಕೆ ಆಗಿದ್ದಾರೆ.

ಯೋಗ ಶಿಕ್ಷಕರಾದ ಶರತ್ ಮರ್ಗಿಲಡ್ಕ ರವರ ಜೊತೆ ಮಾರ್ಗದರ್ಶನ ಪಡೆಯುತ್ತಿರುವ ಇವರು ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ಇವಳು ಗುತ್ತಿಗಾರಿನ ಗೋಪಾಲಕೃಷ್ಣ ಚಿಕ್ಮುಳಿ ಮತ್ತು ಕವಿತಾ ದಂಪತಿಗಳ ಪುತ್ರಿ.