ಕೆ. ವೆಂಕಟ್ರಮಣ ಭಟ್ ಪವನರಿಗೆ ಕಳಂಜ‌ ಸಹಕಾರಿ ಸಂಘದಲ್ಲಿ ಶ್ರದ್ಧಾಂಜಲಿ ಸಭೆ

0

ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ಆಶ್ರಯದಲ್ಲಿರುವ ಕಳಂಜ‌ ಬಾಳಿಲ ರೈತ ಸ್ನೇಹಿತರ ಕೂಟದ ಮುಖ್ಯ ಪ್ರವರ್ತಕ ಪ್ರಗತಿಪರ ಕೃಷಿಕ ಕೆ. ವೆಂಕಟ್ರಮಣ ಭಟ್ ಪವನರಿಗೆ ಕಳಂಜ‌ ಸಹಕಾರಿ ಸಂಘದ ಆಶ್ರಯದಲ್ಲಿ ಶ್ರದ್ಧಾಂಜಲಿ ಸಭೆ ಜ. 9ರಂದು ಸಂಘದ ಪ್ರಧಾನ ಕಚೇರಿಯ ಸಭಾಂಗಣದಲ್ಲಿ ನಡೆಯಿತು.

ಸಂಘದ ಅಧ್ಯಕ್ಷ ಎಂ.‌ಕೂಸಪ್ಪ ಗೌಡ ಮುಗುಪ್ಪು ಅಧ್ಯಕ್ಷತೆ ವಹಿಸಿ ನುಡಿನಮನ ಸಲ್ಲಿಸಿದರು. ಶ್ರೀ ಸುಬ್ರಹ್ಮಣ್ಯ ಸ್ವಾಮಿ ಭಜನಾ ಮಂಡಳಿಯ ಅಧ್ಯಕ್ಷ ಮುಂಡುಗಾರು ಸುಬ್ರಹ್ಮಣ್ಯ, ಕೋಟೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಧರ್ಮದರ್ಶಿ ಹಾಗೂ ಗೌರವ ಪ್ರಧಾನ ಅರ್ಚಕ ವಾರಣಾಶಿ ಗೋಪಾಲಕೃಷ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದು ಮೃತರಿಗೆ ನುಡಿನಮನ ಸಲ್ಲಿಸಿದರು. ಸಭಿಕರ ಪರವಾಗಿ ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ನಿರ್ದೇಶಕರಾದ ಅಜಿತ್ ರಾವ್ ಕಿಲಂಗೋಡಿ ಮತ್ತು ಕೆ. ಎಲ್. ಸುಬ್ರಹ್ಮಣ್ಯ ಕಾವಿನಮೂಲೆ ನುಡಿನಮನ ಸಲ್ಲಿಸಿದರು. ಸುದ್ದಿ ವರದಿಗಾರ ಈಶ್ವರ ವಾರಣಾಶಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಸಂಘದ ಉಪಾಧ್ಯಕ್ಷ ಕರುಣಾಕರ ಶೆಟ್ಟಿ ನಾಲ್ಗುತ್ತು ವಂದಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಮೇಶ್ ನಾಯಕ್ ತಡಗಜೆ, ನಿರ್ದೇಶಕರಾದ ಶುಭ ಕುಮಾರ್ ಬಾಳೆಗುಡ್ಡೆ, ಶ್ರೀಮತಿ ಪಂಕಜಾಕ್ಷಿ, ಶ್ರೀಮತಿ ಮಾಲಿನಿ ಪ್ರಸಾದ್, ವಿಶ್ವನಾಥ ಪರವ, ಮೇದಪ್ಪ ಗೌಡ ತಂಟೆಪ್ಪಾಡಿ, ಭಾರತೀಶಂಕರ ಆದಳ, ಸುಳ್ಯ ಲ್ಯಾಂಪ್ ಸೊಸೈಟಿ ಉಪಾಧ್ಯಕ್ಷ ಬಾಳೆಗುಡ್ಡೆ ಕುಂಞಣ್ಣ ನಾಯ್ಕ, ಕೋಟೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಧರ್ಮದರ್ಶಿ ಸೀತಾರಾಮ ಕೋಟೆ, ವಾರಣಾಶಿ ಸುಬ್ಬಪ್ಪಯ್ಯ, ಕಳಂಜ ಅಂಚೆ ಇಲಾಖೆಯ ಸಹಾಯಕರಾದ ಪ್ರಭಾಕರ ನಾಯಕ್ ಪಂಜಿಗಾರು, ಕೇಶವ ದೀಕ್ಷಿತ್, ಸುಮಂತ ಕೋಟೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸಂಘದ ನಿರ್ದೇಶಕರಾದ