ಸುಳ್ಯ‌ ಜಾತ್ರೋತ್ಸವ : ರಥಬೀದಿಯಲ್ಲಿ ಸ್ವಚ್ಚತಾ ಜಾಗೃತಿ

0

ಸುಳ್ಯ ಜಾತ್ರೋತ್ಸವದ ಅಂಗವಾಗಿ ನಗರದ ರಥ ಬೀದಿಯಲ್ಲಿ ಸ್ವಚ್ಛತೆಯ ಕುರಿತು ಜಾಗೃತಿ ಹಾಗೂ ಪ್ಲಾಸ್ಟಿಕ್ ಬಳಕೆಯ ದುಷ್ಪರಿಣಾಮ ಕುರಿತಂತೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಅಮರ ಸುಳ್ಯ ರಮಣೀಯ ಸುಳ್ಯ ತಂಡದ ನೇತೃತ್ವದಲ್ಲಿ ನಡೆಯಿತು. ನಗರ ಪಂಚಾಯತ್ನ ಈ ತಂಡದ ವತಿಯಿಂದ ರಥಬೀದಿಯ ಕಟ್ಟೆಯಿಂದ ಎಪಿಎಂಸಿ ತನಕ ಜಾಗೃತಿಯ ಫಲಕಗಳನ್ನು ಹಿಡಿದು ಮೆರವಣಿಗೆ ಮೂಲಕ ಸಾಗಿ ಧ್ವನಿವರ್ಧಕದ ಮೂಲಕ ಜಾಗೃತಿಯ ಸಂದೇಶವನ್ನು ನೀಡುವ ಕೆಲಸವನ್ನು ಮಾಡಲಾಯಿತು.

ನಗರ ಪಂಚಾಯತ್ ನ ಮುಖ್ಯ ಅಧಿಕಾರಿ ಎಂಎಚ್ ಸುಧಾಕರ್, ಮಾಜಿ ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ವರ್ತಕರ ಸಂಘದ ಅಧ್ಯಕ್ಷ ಸುಧಾಕರ್ ರೈ ನಪಂ ಸದಸ್ಯೆ ಕಿಶೋರಿ ಶೇಟ್, ವಿಶೇಷವಾಗಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ರಮೇಶ್, ಪ್ರಭಾಕರ್ ನಾಯರ್, ಡಿಎಸ್ ಗಿರೀಶ್, ಮಾಜಿ ಸೈನಿಕರ ಸಂಘದ ಮೋನಪ್ಪ, ಅಬ್ದುಲ್ ರಹಿಮಾನ್, ಮತ್ತಿತರರು ಹಾಗೂ ನಗರ ಪಂಚಾಯತ್ ನ ಸಿಬ್ಬಂದಿಗಳು ಈ ಜಾಗೃತಿ ಜಾಥಾದಲ್ಲಿ ಭಾಗವಹಿಸಿದ್ದರು.