ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿಗೆ ತೇಜಸ್ವಿ ಕಡಪಳ ಆಯ್ಕೆ

0


ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಕೊಡಮಾಡುವ ಸ್ವಾಮಿ ವಿವೇಕಾನಂದ ಯುವ ಪ್ರಶಸ್ತಿಗೆ ದ.ಕ.ಜಿಲ್ಲೆಯಿಂದ ಸಂಘಟಕ ತೇಜಸ್ವಿ ಕಡಪಳ ಆಯ್ಕೆಯಾಗಿದ್ದಾರೆ.
ಕಲಾ ಮತ್ತು ಕ್ರೀಡಾ ಸಂಘಟಕರಾಗಿರುವ ತೇಜಸ್ವಿಯವರು ಸುಳ್ಯ ತಾಲೂಕು ಯುವಜನ ಸಂಯುಕ್ತ ಮಂಡಳಿಯ ಪೂರ್ವಾಧ್ಯಕ್ಷ, ಸುಳ್ಯ ಕ.ಸಾ.ಪ.ಘಟಕದ ಗೌರವ ಕಾರ್ಯದರ್ಶಿ, ಕುಕ್ಕುಜಡ್ಕ ಪ್ರೌಢಶಾಲೆಯ ಚೊಕ್ಕಾಡಿ ಎಜ್ಯಕೇಶನ್ ಸೊಸೈಟಿಯ ಕಾರ್ಯದರ್ಶಿ ಸೇರಿದಂತೆ ಹಲವಾರು ಸಂಘಟನೆಗಳಲ್ಲಿ ಸಕ್ರಿಯರಾಗಿದ್ದಾರೆ.