ಜ. 13-14: ಬಳ್ಪ ನೀರಜರಿ ನೇಮೋತ್ಸವ

0

ಬಳ್ಪ ಗ್ರಾಮದ ನೀರಜರಿಯ ಶ್ರೀ ನಾಗಬ್ರಗ್ಮ ಆದಿ ಮೊಗೇರ್ಕಳ ದೈವಸ್ಥಾನ ಮತ್ತು ಸ್ವಾಮಿ ಕೊರಗಜ್ಜ ಸಾನಿಧ್ಯದಲ್ಲಿ 10 ನೇ ವರ್ಷದ ನೇಮೋತ್ಸವ ಜ. 13 ರಿಂದ 14ರ ತನಕ ಜರಗಲಿದೆ.

ಜ. 13ರಂದು ಬೆಳಿಗ್ಗೆ 8.00 ಗಂಟೆಗೆ ಗಣಹೋಮ ನಡೆಯಲಿದೆ. ಸಂಜೆ 3.00ರಿಂದ ಚೌಕಾರು, ಮಂತ್ರವಾದಿ ಗುಳಿಗ ದೈವದ ನೇಮ ಸಂಜೆ 6.00ಗಂಟೆಗೆ ಕಲ್ಲುರ್ಟಿ ದೈವದ ನೇಮೋತ್ಸವ ನಡೆಯಲಿದೆ. ರಾತ್ರಿ ಅನ್ನಸಂತರ್ಪಣೆ ಬಳಿಕ 10.00 ಗಂಟೆಗೆ ಮೊಗೇರ್ಕಳ ಗರಡಿ ಇಳಿಯುವುದು, ರಾತ್ರಿ 12.00 ಗಂಟೆಗೆ ತನ್ನಿ ಮಾಣಿಗ ಗರಡಿ ಇಳಿಯುವುದು ನಡೆಯಲಿದೆ. ಜ. 14ರಂದು ಬೆಳಿಗ್ಗೆ 5.00 ಗಂಟೆಗೆ ಅಣ್ಣಪ್ಪ ಪಂಜುರ್ಲಿ ದೈವದ ನೇಮ ಬಳಿಕ ಸ್ವಾಮಿ ಕೊರಗಜ್ಜ ದೈವದ ನೇಮೋತ್ಸವ, ಗಂಧ ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ಜರಗಲಿದೆ.