ಕಾಯರ್ತೋಡಿ ದೇವಸ್ಥಾನದ ಆಡಳಿತ ಹಸ್ತಾಂತರ

0

ಕಾಯರ್ತೋಡಿ ದೇವಾಲಯದ ಆಡಳಿತ ಮಂಡಳಿಯ ಅಧಿಕಾರ ಮುಗಿದಿದ್ದು ಇಂದು ದೇವಾಲಯದ ಆಡಳಿತಾಧಿಕಾರಿಯಾಗಿ ಉಪ ತಹಶೀಲ್ದಾರ್ ಚಂದ್ರಕಾಂತ ಎಮ್.ಆರ್. ಅಧಿಕಾರ ಸ್ವೀಕರಿಸಿದರು. ಈ ಸಂದರ್ಭದಲ್ಲಿ ದೇವಾಲಯದ ದಾಖಲೆಯನ್ನು ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಪಿ.ಕೆ.ಉಮೇಶ್ ರವರು ಸ್ವಾಗತಿಸಿ ಆಡಳಿತಾಧಿಕಾರಿಗಳಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿಯ ಮಾಜಿ ಸದಸ್ಯರುಗಳಾದ ಡಿ.ಎಸ್.ಗಿರೀಶ್, ನಾರಾಯಣ ಆಚಾರ್ಯ ಕಾಯರ್ತೋಡಿ , ನಮಿತ ಕುಸುಮಾಧರ, ಶ್ರೀಮತಿ ಅನಂತೇಶ್ವರಿ ಕಲ್ಲುಮುಟ್ಲು, ಕೃಷ್ಣ ಬೆಟ್ಟ, ದೇವಾಲಯದ ಮ್ಯಾನೇಜರ್ ದೇವಿಪ್ರಸಾದ್ , ಬ್ರಹ್ಮಕಲೋತ್ಸವ ಸಮಿತಿ ಕಾರ್ಯದರ್ಶಿ ಕುಸುಮಾಧರ ಎ.ಟಿ. ಮಾಜಿ ವ್ಯವಸ್ಥಾಪನ ಸಮಿತಿ ಸದಸ್ಯರು , ದೇವಾಲಯದ ಅರ್ಚಕ ನೀಲಕಂಠ , ಚಂದ್ರಶೇಖರ ಅಡ್ಪಂಗಾಯ , ವಿಠಲ ಸರ್ವೆಯರ್ ಮೊದಲಾದವರು ಉಪಸ್ಥಿತರಿದ್ದರು.