ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಧನುರ್ಮಾಸದ ಧನು ಪೂಜೆ ಸಂಪನ್ನ

0

ಐವರ್ನಾಡು ಶ್ರೀ ಪಂಲಿಂಗೇಶ್ವರ ದೇವಸ್ಥಾನದಲ್ಲಿ ಜ.14 ರಂದು ಧನು ಪೂಜೆ ಸಂಪನ್ನಗೊಂಡಿತು. ಡಿ.17 ರಿಂದ ಧನುಪೂಜೆ ಪ್ರಾರಂಭಗೊಂಡು ಜ.14 ರವರೆಗೆ ಪ್ರತೀ ದಿನ ಬೆಳಿಗ್ಗೆ ಧನು ಪೂಜೆ ನಡೆಯಿತು.

ಮುಂಜಾನೆ ಊರಿನವರ ಭಜನಾ ಮಂಡಳಿಯಿಂದ ಭಜನಾ ಸಂಕೀರ್ತನೆ ಜರಗಿತು. ದೇವಸ್ಥಾನದ ಪ್ರಧಾನ ಅರ್ಚಕ ಪದ್ಮನಾಭ ಭಟ್ ಪೂಜಾ ಕಾರ್ಯ ನೆರವೇರಿಸಿದರು.

ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತಾಧಿಕಾರಿ ಶ್ಯಾಮ್ ಪ್ರಸಾದ್ ಹಾಗೂ ಭಕ್ತಾದಿಗಳು,ದೇವಸ್ಥಾನದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.