ಹಿರಿಯರ ಕ್ರೀಡಾಕೂಟ ಕಮಲಾ ರಮೇಶ್ ರಾಷ್ಟ್ರ ಮಟ್ಟಕ್ಕೆ

0

ಜ. 13, 14ರಂದು ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಮಟ್ಟದ ಹಿರಿಯರ ಕ್ರೀಡಾಕೂಟದಲ್ಲಿ ಭಾಗವಹಿಸಿದ ಬಾಳಿಲ ಗ್ರಾಮದ ಶ್ರೀಮತಿ ಕಮಲ ರಮೇಶ್ ವಿಶೇಷ ಸಾಧನೆ ಮಾಡಿ ರಾಷ್ಟ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

400 ಮೀ ಓಟದಲ್ಲಿ ಪ್ರಥಮ, 200 ಮೀ. ದ್ವಿತೀಯ, 100 ಮೀ. ತೃತೀಯ ಮತ್ತು 4×100 ರಿಲೇಯಲ್ಲಿ ಪ್ರಥಮ ಸ್ಥಾನ ಪಡೆದು ಫೆ. 2ರಿಂದ 4ರ ತನಕ ತಮಿಳುನಾಡಿನಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಇವರು ಈ ಹಿಂದೆ ಹಿರಿಯರ ಕ್ರೀಡಾಕೂಟದಲ್ಲಿ ಹಲವು ಬಾರಿ ಭಾಗವಹಿಸಿ ಸ್ಥಾನ ಪಡೆದಿದ್ದರು.