ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಭವಿತ್ ಗುತ್ತುಗದ್ದೆ ಪ್ರಥಮ

0

ಮಂಗಳೂರಿನಲ್ಲಿ ಜ.7ರಂದು ನಡೆದ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಭವಿತ್ ಗುತ್ತುಗದ್ದೆ ಇವರು ಕಟಾ ವಿಭಾಗದಲ್ಲಿ ಪ್ರಥಮ ಸ್ಥಾನ ಮತ್ತು ಕುಮಿಟೆ ವಿಭಾಗದಲ್ಲಿ ತೃತಿಯ ಸ್ಥಾನ ಪಡೆದುಕೊಂಡಿರುತ್ತಾರೆ. ಹಾಗೂ ಜ.14ರಂದು ಬಿ.ಸಿ ರೋಡಿನಲ್ಲಿ ನಡೆದ 2ನೇ ರಾಜ್ಯ ಮಟ್ಟದ ಕರಟೆ ಚಾಂಪಿಯನ್ ಶಿಫ್ ನಲ್ಲಿ ಕುಮಿಟೆ ವಿಭಾಗದಲ್ಲಿ ಪ್ರಥಮ ಸ್ಥಾನ ಮತ್ತು ಕಟಾ ವಿಭಾಗದಲ್ಲಿ ತೃತಿಯ ಸ್ಥಾನ ಪಡೆದುಕೊಂಡಿರುತ್ತಾರೆ.

ಇವರು ಎಲಿಮಲೆ ಜ್ಞಾನದೀಪ ವಿದ್ಯಾಸಂಸ್ಥೆಯ 9ನೇ ತರಗತಿಯ ವಿದ್ಯಾರ್ಥಿ.

ಮರ್ಕಂಜ ಗ್ರಾಮದ ಗುತ್ತುಗದ್ದೆ ಕಮಲಾಕ್ಷ ಮತ್ತು ವಸಂತಿ ದಂಪತಿಗಳ ಪುತ್ರ.

ಕರಾಟೆ ಶಿಕ್ಷಣ ಶಿಕ್ಷಕ ನಾರಾಯಣ ಮಳಿ ಅವರ ಮಾಗದರ್ಶನದಲ್ಲಿ ಕರಾಟೆ ತರಬೇತಿ ಪಡೆಯುತ್ತಿದ್ದಾರೆ.