ತಿಲಕ ನವೀನ್ ಆರ್ತಾಜೆ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ

0

ಮಂಗಳೂರಿನ ಮಂಗಳ ಸ್ಟೇಡಿಯಂನಲ್ಲಿ ಜ. 13 ಮತ್ತು 14ರಂದು ನಡೆದ 42ನೇ ರಾಜ್ಯ ಮಟ್ಟದ ಹಿರಿಯರ ಕ್ರೀಡಾಕೂಟದಲ್ಲಿ
ಜಾಲ್ಸೂರು ಗ್ರಾಮದ ಅರ್ತಾಜೆ (ಪಡುಮಜಲು) ನವೀನ್ ಕುಮಾರ್ ರ ಪತ್ನಿಯಾದ ಇವರು 30 ರ ವಯೋಮನದ 200 ಮೀ,100 ಮೀ, ಜೌವಲೀನ್ ತ್ರೋ ಹಾಗೂ 4×100ಹಾಗೂ 4×100ಮಿಶ್ರ ರಿಲೇಯಲ್ಲಿ 4 ಚಿನ್ನದ ಪದಕ ಹಾಗೂ 1 ಬೆಳ್ಳಿ ಪದಕ ಪಡೆದು ಫೆಬ್ರವರಿ 2ರಿಂದ 4ರವರೆಗೆ ತಮಿಳುನಾಡಿನ ತಿರುನಲ್ವೇಲಿಯಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ. ಇವರು ಮರ್ಕಂಜ ಗ್ರಾಮದ ಕುದ್ಕುಳಿ ದಾಮೋದರ ಪದ್ಮಾವತಿ ದಂಪತಿಗಳ ಪುತ್ರಿ.