ಶೀರಡ್ಕ – ಮಡಪ್ಪಾಡಿ ರಸ್ತೆಯ ಗುದ್ದಲಿ ಪೂಜೆ

0


ಶೀರಡ್ಕ ಮಡಪ್ಪಾಡಿ ರಸ್ತೆಯ ಗುದ್ದಲಿ ಪೂಜೆ ಹಾಗೂ ಹಾಡಿಕಲ್ಲು ನೂಜಾಲ ರಸ್ತೆಯ ಉದ್ಘಾಟನಾ ಕಾರ್ಯಕ್ರಮವನ್ನು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಕು.ಭಾಗೀರಥಿ ಮುರುಳ್ಯ ನೆರವೇರಿಸಿದರು. ಗುದ್ದಲಿ ಪೂಜೆ ಹಾಗೂ ಉದ್ಘಾಟನಾ ಕಾರ್ಯಕ್ರಮದ ಬಳಿಕ ಗ್ರಾಮದ ಮಡಪ್ಪಾಡಿ – ಶೀರಡ್ಕ, ಮಡಪ್ಪಾಡಿ – ಹಾಡಿಕಲ್ಲು, ಜೇಡಿಗುಂಡಿ – ಕಡ್ಯ, ಪೂoಬಾಡಿ ರಸ್ತೆಯನ್ನು ಅಭಿವೃದ್ಧಿ ಗೊಳಿಸುವ ಬಗ್ಗೆ ಭರವಸೆ ನೀಡಿದರು. ಹಲವು ಸಮಯದ ಬೇಡಿಕೆಯಾದ ಕಡ್ಯ ಕೆಮ್ಮನಬಳ್ಳಿ ಹಾಗೂ ಪೂoಬಾಡಿ ಸೇತುವೆ ನಿರ್ಮಾಣದರ ಬಗ್ಗೆ ಸ್ಥಳ ವೀಕ್ಷಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷರಾದ ಹರೀಶ್ ಕಂಜಿಪಿಲಿ, ಮಹಾಶಕ್ತಿಕೇಂದ್ರದ ಅಧ್ಯಕ್ಷರಾದ ವಿನಯ್ ಕುಮಾರ್ ಮುಳುಗಾಡು, ಮಡಪ್ಪಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರುಗಳಾದ ಚಂದ್ರಮತಿ ಪಿ. ಜಿ, ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾದ ಶಕುಂತಲಾ ಕೇವಳ, ಬೂತ್ ಸಮಿತಿ ಅಧ್ಯಕ್ಷರುಗಳಾದ ವಿನೋದ್ ಪೂಂಬಾಡಿ, ಧನ್ಯಕುಮಾರ್ ದೇರುಮಜಲು, ಹಿರಿಯರಾದ ಎನ್. ಟಿ ಹೊನ್ನಪ್ಪ, ಲೋಕಪ್ಪ ಶೀರಡ್ಕ ರಾಮಚಂದ್ರ ಬಳ್ಳಡ್ಕ, ನಿತ್ಯಾನಂದ ಬಳ್ಳಡ್ಕ, ಹೆಚ್. ಬಿ ಜಯರಾಮ್, ಕರುಣಾಕರ ಪಾರೆಪ್ಪಾಡಿ, ಚಂದ್ರಶೇಖರ ಗೋಳ್ಯಾಡಿ, ಧರ್ಮಪಾಲ ತಳೂರು, ಭವಾನಿಶಂಕರ ಬಾಳಿಕಳ, ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಸಚಿನ್ ಬಳ್ಳಡ್ಕ ಹಾಗೂ ಬಿಜೆಪಿಯ ಕಾರ್ಯಕರ್ತರು, ಫಲಾನುಭವಿಗಳು ಜೊತೆಗಿದ್ದರು.