ರಾಮ ಮಂದಿರದ ಬ್ರಹ್ಮಕಲಶೋತ್ಸವದ ಸಭೆ

0

ಸುಳ್ಯ ರಾಮ ಮಂದಿರದ ಬ್ರಹ್ಮಕಲಶೋತ್ಸವದ ಕುರಿತು ಪದಾಧಿಕಾರಿಗಳ ಸಭೆಯು ಮಂದಿರದ ಧರ್ಮದರ್ಶಿ ಮಂಡಳಿಯ ಅಧ್ಯಕ್ಷ ಕೆ.ಉಪೇಂದ್ರ ಪ್ರಭು ರವರ ಅಧ್ಯಕ್ಷತೆಯಲ್ಲಿ ಜ.16ರಂದು ನಡೆಯಿತು.
ಆಮಂತ್ರಣ ಪತ್ರ ಮುದ್ರಣದ ಅಂತಿಮ ಹಂತದ ಬಗ್ಗೆ ಕಾರ್ಯಕ್ರಮದ ಆಯೋಜನೆಯ ರೂಪು ರೇಷೆಗಳ ಬಗ್ಗೆ ಸಮಿತಿಯ ಪ್ರಧಾನ ಕಾರ್ಯದರ್ಶಿ ನಾರಾಯಣ ಕೇಕಡ್ಕ ವಿವರ ತಿಳಿಸಿದರು.


ಸಮಿತಿ ಅಧ್ಯಕ್ಷ ಕೃಷ್ಣ ಕಾಮತ್ ಅರಂಬೂರು, ಕೋಶಾಧಿಕಾರಿ ಡಾ.ಲೀಲಾಧರ, ಉಪಾಧ್ಯಕ್ಷ ಎನ್.ಎ.ರಾಮಚಂದ್ರ, ನ್ಯಾಯವಾದಿ ಜಯಪ್ರಕಾಶ್ ರೈ ಸುಳ್ಯ, ಗೋಕುಲ್ ದಾಸ್ ಸುಳ್ಯ, ದೇವರಾಜ್ ಆಳ್ವ ,ಹರೀಶ್ ರೈ ಉಬರಡ್ಕ,
ವಿಠಲ, ಬೆಳ್ಯಪ್ಪ ಗೌಡ ಹಾಗೂ ಧರ್ಮದರ್ಶಿ ಮಂಡಳಿಯ ಸದಸ್ಯರು ಮತ್ತು ಸಮಿತಿಯ ಸಂಚಾಲಕರು ಉಪಸ್ಥಿತರಿದ್ದರು.
ಜತೆ ಕಾರ್ಯದರ್ಶಿ ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು.