ಶೇಣಿ: ಕೋಟಿ ಚೆನ್ನಯಬ್ರಹ್ಮ ಬೈದರ್ಕಳ ನೇಮೋತ್ಸವದ ಗೊನೆ ಮುಹೂರ್ತ

0

ಅಮರಪಡ್ನೂರು ಗ್ರಾಮದ ಶೇಣಿ ಶ್ರೀ ಕೋಟಿ ಚೆನ್ನಯ ಬ್ರಹ್ಮ ಬೇದರ್ಕಳ ಗರಡಿಯಲ್ಲಿ ಜ.24 ರಂದು ವರ್ಷಂಪ್ರತಿ ನಡೆಯಲಿರುವ ಶ್ರೀ ಕೋಟಿ ಚೆನ್ನಯ ಬ್ರಹ್ಮ ಬೈದರ್ಕಳ ನೇಮೋತ್ಸವಕ್ಕೆ ಇಂದು ಬೆಳಗ್ಗೆ ಗೊನೆ ಮುಹೂರ್ತ ನೆರವೇರಿತು. ಗರಡಿಯ ಅನುವಂಶಿಕ ಆಡಳ್ತೆದಾರ ಬಿ.ಕೆ ಧರ್ಮಪಾಲ ಶೇಣಿಯವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಸ್ಥಳೀಯ ಭಕ್ತಾದಿಗಳು ಭಾಗವಹಿಸಿದರು.