ಅರಂಬೂರು ಮೂಕಾಂಬಿಕಾ ಭಜನಾ ಮಂದಿರದ ಸುವರ್ಣ ಮಹೋತ್ಸವದ ಆಮಂತ್ರಣ ಬಿಡುಗಡೆ

0

ಅರಂಬೂರು ಶ್ರೀ ಮೂಕಾಂಬಿಕಾ ಭಜನಾ ಮಂದಿರದ ಸುವರ್ಣ ಮಹೋತ್ಸವ ಕಾರ್ಯಕ್ರಮವು
ಫೆ.13,14 ಮತ್ತು 15 ರಂದು ನಡೆಯಲಿದ್ದು ಆಮಂತ್ರಣ ಪತ್ರ ಬಿಡುಗಡೆಯು
ಇಂದು ಬೆಳಗ್ಗೆ ಭಜನಾ ಮಂದಿರದಲ್ಲಿ ನಡೆಯಿತು.


ಸಮಿತಿಯ ಗೌರವಾಧ್ಯಕ್ಷ ಕೃಷ್ಣ ಕಾಮತ್ ಅರಂಬೂರು ರವರು ಆಮಂತ್ರಣ ಪತ್ರ ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಮಂದಿರದ ಅರ್ಚಕ ಎಸ್.ಜಿ.ಕೃಷ್ಣ ಭಟ್ ಪ್ರಾರ್ಥನೆ ನೆರವೇರಿಸಿದರು.

ಸುವರ್ಣ ಮಹೋತ್ಸವ
ಸಮಿತಿ ಅಧ್ಯಕ್ಷ ಬಿ.ಶ್ರೀಪತಿ ಭಟ್ ಮಜಿಗುಂಡಿ, ಕಾರ್ಯಾಧ್ಯಕ್ಷ ಕೃಷ್ಣಪ್ಪ ಕೆ‌.ಎಸ್.ಕೆದಂಬಾಡಿ, ಕಾರ್ಯದರ್ಶಿ ಬಂಗಾರು ಭಾರದ್ವಾಜ್, ಕೋಶಾಧಿಕಾರಿ ನಾರಾಯಣ ನಾಯ್ಕ ಅರಂಬೂರು, ಉಪ ಕಾರ್ಯದರ್ಶಿ ಪುಷ್ಪರಾಜ್ ಕುಲಾಲ್, ಭಜನಾ ಮಂದಿರದ ಅಧ್ಯಕ್ಷ ರತ್ನಾಕರ ರೈ ಅರಂಬೂರು, ಆರ್ಥಿಕ ಸಮಿತಿ ಸಂಚಾಲಕ ದಿವಾಕರ ನಾಯಕ್ ಸರಳಿಕುಂಜ, ಕೊರಗಪ್ಪ ಮಾಸ್ತರ್ ಕಣಕ್ಕೂರು, ಕುಮಾರಸ್ವಾಮಿ ತೆಕ್ಕುಂಜ, ಪದ್ಮಯ್ಯ ಗೌಡ ಪಡ್ಪು, ಸುದೇಶ್ ಅರಂಬೂರು, ಚಂದ್ರಶೇಖರ ನೆಡ್ಚಿಲು, ಅಶೋಕ ಪೀಚೆಮನೆ, ಗುರುಪ್ರಸಾದ್ ಕುಡೆಕಲ್ಲು, ಜನಾರ್ಧನ ಸಿರಿಕುರಲ್, ಉಮೇಶ್ ನಾಯ್ಕ್ ಮಜಿಗುಂಡಿ, ಕೆ.ಸಿ.ಹಾರಾವತಿ ಮಾಂಬುಳಿ ಹಾಗೂ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ಪ್ರಥಮ ದೇಣಿಗೆಯನ್ನು ಆರ್ಥಿಕ ಸಮಿತಿ ಸಂಚಾಲಕರಿಗೆ ಹಸ್ತಾಂತರಿಸಲಾಯಿತು. ಅಧ್ಯಕ್ಷಬಿ.ಶ್ರೀಪತಿ ಭಟ್ ಮಜಿಗುಂಡಿ ಸ್ವಾಗತಿಸಿ, ವಂದಿಸಿದರು.