ಜ.24: ಶೇಣಿ ಕೋಟಿ ಚೆನ್ನಯ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ನೇಮೋತ್ಸವ

0

ಅಮರಪಡ್ನೂರಿನ ಶೇಣಿ ಶ್ರೀ ಕೋಟಿ ಚೆನ್ನಯ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ಜ.24 ರಂದು ವರ್ಷಂಪ್ರತಿ ನಡೆಯುವ ಶ್ರೀ ಬ್ರಹ್ಮ ಬೈದೇರುಗಳ ನೇಮೋತ್ಸವವು ನಡೆಯಲಿರುವುದು.

ಬೆಳಗ್ಗೆ ಗಣಪತಿ ಹವನವಾಗಿ ಬೈದೇರುಗಳಿಗೆ ಕಲಶಾಭಿಷೇಕ ತಂಬಿಲ ಪ್ರಸನ್ನ ಪೂಜೆಯಾಗಲಿದೆ. ಸಂಜೆ ದೈವಗಳ ಭಂಡಾರ ತೆಗೆದು ರಾತ್ರಿ ಗಂಟೆ 9.30 ರಿಂದ ಬೈದೇರುಗಳು ಗರಡಿ ಇಳಿಯುವುದು ಬಳಿಕ ಚೊಕ್ಕಾಡಿ ಶ್ರೀ ಉಳ್ಳಾಕುಲು ಪಾದಕ್ಕೆ ಕಾಣಿಕೆ ಅರ್ಪಿಸುವುದು. ನಂತರ ಮಾನಿಬಾಲೆ ಗರಡಿ ಇಳಿದು ಧರ್ಮ ಚಾವಡಿಗೆ ಬಂದು ಹಾಲು ಕುಡಿಯುವುದು.


ಪ್ರಾತ:ಕಾಲ 4.00 ಗಂಟೆಗೆ ಕೋಟಿ ಚೆನ್ನಯ ರ ದರ್ಶನ ನಂತರ ಬೈದೇರುಗಳ ಸೇಟು ನಡೆದು ಆಗಮಿಸಿದ ಎಲ್ಲಾ ಭಕ್ತಾದಿಗಳಿಗೆ ಪ್ರಸಾದ ವಿತರಣೆಯಾಗಲಿರುವುದು. ಸಂಜೆ ಗಂಟೆ 6.00 ರಿಂದ ತಾಳ ನಿನಾದಂ ತಂಡ ಪಡ್ಪಿನಂಗಡಿ ಯವರಿಂದ ಆಕರ್ಷಕ ಕುಣಿತ ಭಜನೆ ರಾತ್ರಿ ಗಂಟೆ 8.00 ರಿಂದ ಕಳಂಜ ಯುವಕ ಮಂಡಲದ ಹವ್ಯಾಸಿ ಕಲಾವಿದರಿಂದ ಜಾಂಬವತಿ ಕಲ್ಯಾಣ ಅಗ್ರಪೂಜೆ ಯಕ್ಷಗಾನ ಪ್ರದರ್ಶನವಾಗಲಿರುವುದು. ಆಗಮಿಸಿದ ಭಕ್ತಾದಿಗಳಿಗೆ ರಾತ್ರಿ ಸಮಯದಲ್ಲಿ ಅನ್ನ ಪ್ರಸಾದ ವಿತರಣೆಯಾಗಲಿದೆ ಎಂದು ಅನುವಂಶಿಕ ಆಡಳ್ತೆದಾರ ಬಿ.ಕೆ.ಧರ್ಮಪಾಲ ಶೇಣಿ ಯವರು ತಿಳಿಸಿರುತ್ತಾರೆ.